News & Events
ಡಾ| ಕೆ. ಕಮಲಾಕ್ಷರಿಗೆ ವಿದಾಯ ಕೂಟ
ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ| ಕೆ.ಕಮಲಾಕ್ಷರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಯ ಸಂದರ್ಭ ನೋಡಿ ನಮ್ಮ ನಿರೀಕ್ಷೆಗೂ ಮೀರಿ ತಮ್ಮದೇ ಆದ ರೀತಿಯಲ್ಲಿ ಸಂಸ್ಥೆಯ ಒಳಿತಿಗಾಗಿ ನಿರಂತರವಾಗಿ ದುಡಿದ ಡಾ| ಕಮಲಾಕ್ಷರು ಶುಕ್ಲ ಪಕ್ಷದ ಚಂದ್ರನಂತೆ ಮುಂದೆ ಬದುಕಿನಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘವು ನಾಲಂದ ಕಾಲೇಜನ್ನು ವಹಿಸಿಕೊಂಡಾಗ ಮುಂದೆ ಇದನ್ನು ನಡೆಸುವ ಸಾರಥಿ ಯಾರೆಂಬ ವಿಚಾರ ಬಂದಾಗ
ವಿಶ್ವ ಅರ್ಬುದ ದಿನ
ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ವಿಶ್ವ ಅರ್ಬುದ ದಿನವನ್ನು ಆಚರಿಸಲಾಯಿತು. ಮದ್ಯಪಾನ, ಧೂಮಪಾನ, ಹೊಗೆಸೊಪ್ಪಿನ ಸೇವನೆಗಳಿಂದ ಮತ್ತು ಎಂಡೋಸಲ್ಪಾನ್ ಮೊದಲಾದ ಮಾರಕ ವಿಷಗಳನ್ನು ಬಳಸಿ ಬೆಳೆಸಿದ ಆಹಾರಗಳನ್ನು ಸೇವಿಸುವುದರಿಂದ ಆಹಾರ ಕ್ರಮಗಳಿಂದ ಅರ್ಬುದ ರೋಗ ಬರುತ್ತದೆ. ಆದುದರಿಂದ ಕೆಟ್ಟವ್ಯಸನಗಳಿಗೆ ಬಲಿಯಾಗದೆ ಶುದ್ಧ ಆಹಾರವನ್ನು ಸೇವಿಸಿದರೆ ನಮ್ಮ ಬದುಕು ಹಸನಾಗುತ್ತದೆ. ಈ ವಿಚಾರದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ಕಾಲೇಜಿನ ಉಪನ್ಯಾಸಕ ಕಿಶನ್ ಪಳ್ಳತ್ತಡ್ಕರವರು ನುಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆಯವರು ಅರ್ಬುದ ರೋಗಗಳಲ್ಲಿ ಹಲವು
’ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆಯಿಂದ ಸುಸ್ಥಿರ ಅಭಿವೃದ್ಧಿ ಹಾಗೂ ಜೀವವೈವಿಧ್ಯಗಳ ಅಸ್ತಿತ್ವ’ ಎಂಬ ಸಂದೇಶದೊಂದಿಗೆ ಜೀವ ಜಲ ಕಿರುಚಿತ್ರಕ್ಕೆ ಚಾಲನೆ.
ಪೆರ್ಲ: ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ – ಪ್ರಾಕೃತಿಕ ನೀರಿನ ಮೂಲಗಳಾದ ತೋಡು, ಕೆರೆ, ಹಳ್ಳಗಳ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ತೋಡುಗಳಿಗೆ ವಿವಿಧ ಶೈಲಿಗಳಲ್ಲಿನ ತಡೆ ನಿರ್ಮಾಣ, ತಡೆಗಳ ಮೂಲಕ ಸಂಗ್ರಹಿದ ನೀರಿನ ಉಪಯೋಗ, ಕೆರೆಗಳ ಸಂರಕ್ಷಣೆ, ಕೃಷಿ ಚಟುವಟಿಕೆಗಳಲ್ಲಿ ನೀರಿನ ಸದ್ಭಳಕೆ ,ಮುಂತಾದ ವಿಷಾಯಾಧರಿತ ಕಿರು ಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ : ಶಂಕರನಾರಾಯಣ ಹೊಳ್ಳ ಚಾಲನೆ ನೀಡಿದರು. ಸ್ಥಳೀಯ ತೋಡುಗಳ ಉಗಮ ಹಾಗೂ ಅವುಗಳ ಹರಿಯುವಿಕೆಯ ವಿವಿಧ ಪ್ರದೇಶಗಳ
ಮಾದಕ ವಸ್ತುಗಳ ವಿರುದ್ದ ತಿಳುವಳಿಕಾ ಜನಜಾಗೃತಿ
ಪೆರ್ಲ : ಕೇರಳ ರಾಜ್ಯ ಯುವಜನ ಆಯೋಗ ಮತ್ತು ಎನ್.ಎಸ್.ಎಸ್ ನ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ದ ತಿಳುವಳಿಕಾ ತರಗತಿಯನ್ನು ನಾಲಂದ ಮಹಾವಿದ್ಯಾಲದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಬಕಾರಿ ನಿಗ್ರಹ ಅಧಿಕಾರಿ ಯನ್. ಜಿ. ರಘನಾಥನ್ ತರಗತಿ ನಡೆಸಿದರು. ಯುವಜನಾಂಗ ಮಾದಕ ವಸ್ತುಗಳ ದುಷ್ಪಾರಿಣಮಗಳ ಬಗ್ಗೆ ತಿಳಿದು ಜಾಗೃತರಾಗಬೇಕು ಹಾಗೂ ಮದ್ಯ, ಬೀಡಿ-ಸಿಗರೇಟು, ಪಾನ್ ಮಸಾಲ, ಗಾಂಜ, ಮುಂತಾದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು. ಕೇರಳ ರಾಜ್ಯ ಯುವಜನ ಆಯೋಗದ ಸದಸ್ಯ ಮಣಿಕಂಠ, ಪ್ರಸ್ತುತ
ಪ್ರಜಾಪ್ರಭುತ್ವ ದಿನಾಚರಣೆ
ಪೆರ್ಲ ನಾಲಂದ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ಎನ್. ಎಸ್. ಎಸ್ ನ ಸಹಯೋಗದೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾರತೀಯ ಸೇನಾ ನಿವೃತ್ತ ಹವಾಲ್ದಾರ್ ಚಂದ್ರ ಕೆ. ಅವರು ದ್ವಜಾರೋಹಣಗೈದು ಪ್ರಜಾಪ್ರಭುತ್ವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿಗಳ ಪ್ರಾಥನೆಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭವಾಗಿ ಮುಖ್ಯ ಅತಿಥಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ತನ್ನ ಸೇನಾ ಜೀವನದ ಅನುಭವವಗಳನ್ನು ಹಂಚಿಕ್ಕೊಂಡರು ಹಾಗೂ ವಿದ್ಯಾರ್ಥಿಗಳು ತಮ್ಮನ್ನು ತಾವು ದೇಶ ಸೇವೆಗೆ ತೊಡಗಿಸಿಕ್ಕೊಳ್ಳಬೇಕು ಎಂದರು. ಶ್ರೀಯುತರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 1998 ರಲ್ಲಿ
ನಾಲಂದದಲ್ಲಿ ವಿವೇಕಾನಂದ ಜಯಂತಿ
ಪೆರ್ಲ : “ವಿವೇಕಾನಂದರು ಭಾರತೀಯ ಸಂಸ್ಕಾರವನ್ನುಜಗತ್ತಿಗೆ ತಿಳಿಸಿ ಅತೀ ಸಣ್ಣ ವಯಸ್ಸಿನಲ್ಲೇ ಖ್ಯಾತಿ ಪಡೆದವರು. ಯುವಜನಾಂಗಕ್ಕೆ ಆದರ್ಶರಾದವರೂ ಆಗಿದ್ದಾರೆ” ಎಂದು ಕರುಣಾಕರ ಮಾಸ್ತರ್ ಹೇಳಿದರು. ಅವರು ನಾಲಂದ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಆಡಳಿತ ಮಂಡಳಿ ಜಂಟಿಯಾಗಿ ಸಂಘಟಿಸಿದ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿವೇಕಾನಂದರ ಜೀವನಚರಿತ್ರೆಯನ್ನು ಹಲವಾರು ವಿಚಾರಗಳ ಮೂಲಕ ವಿದ್ಯಾರ್ಥಿಗಳ ಮುಂದಿಟ್ಟ ಅವರು ಯುವಜನರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಭಾರತೀಯ ಸಂಸ್ಕಾರವನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ
ಸಂಕುಚಿತ ಸಮಾಜದ ಪರಿವರ್ತನೆ ಎನ್.ಎಸ್.ಎಸ್‌ನಿಂದ ಸಾಧ್ಯ- ಡಾ|ಸಿ.ಬಾಲನ್
ಎನ್.ಎಸ್.ಎಸ್‌ನ ವಿದ್ಯಾರ್ಥಿಗಳು ತಮ್ಮ ಸೇವಾ ಸಮಯದಲ್ಲಿ ಯಾವುದಾದರೊಂದು ಒಳ್ಳೆಯ ಸಮಾಜ ಸೇವೆಯನ್ನು ಮಾಡಿ ಸಮಾಜದಲ್ಲಿ ಗುರುತನ್ನು ಉಳಿಸಬೇಕು ಎಂದು ಪೆರಿಯ ಡಾ|ಅಂಬೆಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಸಿ.ಬಾಲನ್ ಅವರು ಉಮೇಶ್ ಭಂಡಾರಿ ಪೂವನಡ್ಕ ಅವರ ಮನೆಯಲ್ಲಿ ನಡೆದ ತರಗತಿಯಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇವರು ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ಶಿಬಿರಾರ್ಥಿಗಳ ಜೊತೆ ಸಂವಹನ ನಡೆಸಿದರು. ಕಾರ್ಯಕ್ರಮದಲ್ಲಿ ಶಂಕರ ಖಂಡಿಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,
ಮಾದಕ ವಸ್ತುಗಳ ಸಮಸ್ಯೆ ತಿಳುವಳಿಕಾ ತರಗತಿ
ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ಮಾದಕ ವಸ್ತುಗಳ ಸಮಸ್ಯೆ ತಿಳುವಳಿಕಾ ತರಗತಿ ದರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಮತ್ತು ಜಸ ಜಾಗೃತಿ ವೇದಿಕೆಯ ಕಾಸರಗೋಡು ವಲಯದ ಸಹಕಾರದಲ್ಲಿ ನಡೆಯಿತು.ಜನಜಾಗೃತಿ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಮೇಲ್ವಿಚಾರಕರಾದ ಮೋಹನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ
ಉತ್ತಮ ಸಮಾಜ ನಿರ್ಮಾಣಕ್ಕೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರ ಮುಹಮ್ಮದ್ ಆಲಿ ಕೆ. ಪೆರ್ಲ
ಪೆರ್ಲ : ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಅಂಗವಾಗಿ, ಶಿಕ್ಷಣದಲ್ಲಿ ಸಾಮಾಜಿಕ ಸೇವೆಯ ಮೌಲ್ಯ ಎಂಬ ವಿಷಯದ ಬಗ್ಗೆ ಸರಕಾರಿ ಕಾಲೇಜು ಕಾಸರಗೋಡಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಭೂಮಿತ್ರ ಸೇನಾ ಕ್ಲಬ್ಬಿನ ಸಂಚಾಲಕರೂ ಆದ ಮುಹಮ್ಮದ್ ಆಲಿ ಕೆ. ಪೆರ್ಲ, ಸಮಾಜ ಬೆಳೆದರೆ ರಾಷ್ಟ್ರ ಬೆಳೆಯುವುದು, ಉತ್ತಮ ಸಮಾಜ ನಿರ್ಮಾಣಕ್ಕೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಇಟ್ಟಿಪಳ್ಳ
ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಟ್ಟ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಿಂದ ಅನತಿ ದೂರದಲ್ಲಿ ಕಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಮನೋಹರವಾದ ಒಂದು ನೀರಿನ ಸಂಗ್ರಹವಿದೆ. ಈ ಮದಕಕ್ಕೆ ಪ್ರದೇಶವಾಸಿಗಳು “ಇಟ್ಟಿಪಳ್ಳ” ಎಂದು ಕರೆಯುತ್ತಾರೆ. ಇತಿಹಾಸ ಯಾವುದೇ ಇರಲಿ ಈ ಮದಕದಲ್ಲಿ ಏಪ್ರೀಲ್ ತಿಂಗಳಲ್ಲೂ ಬತ್ತದ ನೀರಿನ ಸಂಗ್ರಹ ವಿಜ್ಞಾನಕ್ಕೆ ಒಂದು ಸವಾಲಾಗಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಶಿಬಿರವನ್ನು ಹಮ್ಮಿಕೊಂಡ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಈ ಮದಕಕ್ಕೆ ಭೇಟಿ ಕೊಟ್ಟು ಶುಚಿಗೊಳಿಸಿದರು. ಇಂತಹ