ಎನ್.ಎಸ್.ಎಸ್ನ ವಿದ್ಯಾರ್ಥಿಗಳು ತಮ್ಮ ಸೇವಾ ಸಮಯದಲ್ಲಿ ಯಾವುದಾದರೊಂದು ಒಳ್ಳೆಯ ಸಮಾಜ ಸೇವೆಯನ್ನು ಮಾಡಿ ಸಮಾಜದಲ್ಲಿ ಗುರುತನ್ನು ಉಳಿಸಬೇಕು ಎಂದು ಪೆರಿಯ ಡಾ|ಅಂಬೆಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಸಿ.ಬಾಲನ್ ಅವರು ಉಮೇಶ್ ಭಂಡಾರಿ ಪೂವನಡ್ಕ ಅವರ ಮನೆಯಲ್ಲಿ ನಡೆದ ತರಗತಿಯಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇವರು ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ಶಿಬಿರಾರ್ಥಿಗಳ ಜೊತೆ ಸಂವಹನ ನಡೆಸಿದರು.
ಕಾರ್ಯಕ್ರಮದಲ್ಲಿ ಶಂಕರ ಖಂಡಿಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಉಮೇಶ್ ಭಂಡಾರಿ ಪೂವನಡ್ಕ, ರಾಧಾಕೃಷ್ಣ ಆಳ್ವ ಪೂವನಡ್ಕ,ರಮಾನಂದ ಆಳ್ವ, ಗಣರಾಜ ಆಳ್ವ ಪೂವನಡ್ಕ, ರಾಮಣ್ಣ ಪೂಜಾರಿ ಬಾಂಕನ, ಮಾಲಿನಿ ಉಪನ್ಯಾಸಕಿ ನಾಲಂದ ಮಹಾವಿದ್ಯಾಲಯ ಪೆರ್ಲ, ಅನೀಶ್ ಕುಮಾರ್ ಉಪನ್ಯಾಸಕರು ಶ್ರೀ ಶಾರದಾಂಬ ಹೈಯರ್ ಸೆಕಂಡರಿ ಶಾಲೆ ಶೇಣಿ, ವಿಶಾಲ ಎಮ್. ಆರ್, ಮಂಜುನಾಥ ಶೆಟ್ಟಿ ಪೆರ್ಲ ನಾಲಂದ ಮಹಾವಿದ್ಯಾಲಯ ಪೆರ್ಲ, ಎನ್.ಎಸ್.ಎಸ್ ವಿದ್ಯಾರ್ಥಿಗಳಾದ ವಿಕಾಸ್, ನಯನ, ಅಕ್ಷತ ಕುಮಾರಿ, ಮೊದಲಾದವರು ಉಪಸ್ಥಿತರಿದ್ದರು.