ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಸಮಾರೋಪ ಸಮಾರಂಭ ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಉದ್ಘಾಟಿಸಿ, ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ತಮಗೂ ದೇಶಕ್ಕೂ ಒಳಿತಾಗುತ್ತದೆ, ಈ ನಿಟ್ಟಿನಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕವು ನಿರ್ಮಿಸಿದ ಬೇಂಗಪದವು ಬಸ್ ತಂಗುದಾಣ, ಬೇಂಗಪದವು-ಬಾಂಕನ-ಸೊಮಾಜೆ-ದಾಸ್ರೋಕು ರಸ್ತೆ, ಬೇಂಗಪದವಿನಂದ ಶಾಲೆಗೆ ಬರುವ ಕಾಲುದಾರಿ ಕೆಲಸವು ಶ್ಲಾಘನೀಯವಾಗಿದ್ದು, ಭವಿಷ್ಯತ್ತಿನಲ್ಲಿ ಇತಂಹ ಯೋಜನೆಯಲ್ಲದೆ, ನೀರಿನ ಸಂಪನ್ಮೂಲ ಹೆಚ್ಚಿಸುದರ ಕುರಿತಾದ ಯೋಜನೆ ಮಾಡಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ಕೆ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಯಾಂಮ್ಕೋ ಲಿಮಿಟೆಡ್ ಮಂಗಳೂರು ಇದರ ಉಪಾಧ್ಯಕ್ಷರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೂ ಆದ ಶಂ. ನಾ ಖಂಡಿಗೆ ರಾಷ್ಟ್ರೀಯ ಸೇವಾ ಯೋಜನೆಯ ಸ್ಮರಣಸಂಚಿಕೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ ನಿರ್ದೇಶಕರು ಕ್ಯಾಂಮ್ಕೋ ಲಿಮಿಟೆಡ್ ಮಂಗಳೂರು, ಡಾ. ಶ್ರೀಪತಿ ಕಜಂಪಾಡಿ ಭಾಗವಸಿದರು. ಶ್ರೀ ಉದಯ.ಬಿ ಅಧ್ಯಕ್ಷ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಎಣ್ಮಕಜೆ ಗ್ರಾಮ ಪಂಚಾಯತು, ಸತೀಶ್ ಕುಲಾಲ್ ನಲ್ಕ ಎಣ್ಮಕಜೆ ಗ್ರಾಮ ಪಂಚಾಯತ್ತಿನ ಸದಸ್ಯರು, ರಾಧಾಕೃಷ್ಣ ಅಡ್ಯಂತಾಯ ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮೇನೇಜರ್, ಶಿವಕುಮಾರ್ ಮುಖ್ಯೋಪಾದ್ಯಾಯರು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಬೇಂಗಪದವು, ಶ್ರೀ ಶಾಹುಲ್ ಹಮೀದ್ ಹಾಜಿ ಖಂಡಿಗೆ, ಅಧ್ಯಕ್ಷರು ಶಿಬಿರದ ವ್ಯವಸ್ಥಾಪನಾ ಸಮಿತಿ, ರಾಧಾಕೃಷ್ಣ ಆಳ್ವ ಪೂವನಡ್ಕ, ವೇಣುಗೋಪಾಲ ಭಟ್ ಸೋಮಾಜೆ, ಶ್ರೀಕೃಷ್ಣ ಭಟ್ ಪೆಲ್ತಾಜೆ, ರಾಮಣ್ಣ ಪೂಜಾರಿ ಬಾಂಕನ, ಮುಂತಾದವರು ಕಾರ್ಯಕ್ರಮಕ್ಕೆ ಶುಭಾಶಂಸನೆ ಸಮರ್ಪಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಶಿಬಿರದ ನಿರ್ದೇಶಕರಾದ ಅಶೋಕ ಮೊಟ್ಟಕುಂಜ ಶಿಬಿರದ ಮೌಲ್ಯಮಾಪನ ನಡೆಸಿದರು. ಎನ್.ಎಸ್.ಎಸ್ ಸದಸ್ಯರಾದ ಅರ್ಪಿತ್, ಶ್ರೀಷಾ, ಧನ್ಯ, ಪ್ರಸೀನ, ದೀಪ್ತಿ, ನಿಯಾಸ್, ಸುದಾಕರ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆ ಸ್ವಾಗತಿಸಿ, ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್ ವಂದಿಸಿದರು.