×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ – ಸೆಮಿನಾರ್

ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬೇಂಗಪದವು ಶ್ರೀ ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಪ್ತ ದಿನ ವಿಶೇಷ ಶಿಬಿರದಲ್ಲಿ “ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ” ಎಂಬ ವಿಷಯದ ಕುರಿತು ಸೆಮಿನಾರ್ ನಡೆಯಿತು. ವಿಷ್ಣುಪ್ರಕಾಶ್ ಮುಳ್ಳೇರಿಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಗತಿಯನ್ನು ನಡೆಸಿಕೊಟ್ಟರು. ಕೇಂದ್ರ ಸರಕಾರದ ಯೋಜನೆಯಾದ ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿಯ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು.

4

3

500 ಮತ್ತು 1000 ಮುಖಬೆಲೆಯ ಅಪಮೌಲ್ವೀಕರಣದಿಂದ ಉದ್ಭವಿಸಿದ ಹಣದ ವಿನಿಮಯ ಮತ್ತು ಚಿಲ್ಲರೆ ಸಮಸ್ಯೆಯನ್ನು ಇಂದಿನ ಹೊಸ ತಂತ್ರಜ್ಞಾನದಿಂದ ಸುಲಭವಾಗಿ ಪರಿಹರಿಸಬಹುದು ಎಂದು ಹೇಳಿದರು. ವಸ್ತುಗಳ ಮಾರಾಟಗಾರರು ಮತ್ತು ಖರೀದು ಮಾಡಬಯಸುವ ವ್ಯಕ್ತಿಗಳು ಮೊಬೈಲ್ ಬ್ಯಾಂಕಿಂಗ್, ಇ-ವ್ಯಾಲೆಟ್ , ಯು.ಎಸ್.ಎಸ್.ಡಿ, ಎಟಿಯಂ ಮತ್ತು ಇಂಟರ್‌ನೆಟ್ಟ್ ಬ್ಯಾಂಕಿಂಗ್ ಮೂಲಕ ನಗದು ರಹಿತ ವ್ಯವಹಾರವನ್ನು ಸುಲಭದಲ್ಲಿ ಹೇಗೆ ನಡೆಸಬಹುದು ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಮಾತ್ರವಲ್ಲ ತಮ್ಮ ಖಾತೆಯ ಹಣವನ್ನು ಇನ್ನೊಬ್ಬರ ಬೇಂಕ್ ಖಾತೆಗೆ ಸುಲಭವಾಗಿ ಕಳಿಸಿಕೊಡುವ ವಿಧಾನದ ಬಗ್ಗೆ ವಿವರಿಸಿದರು. ಹಣದ ನಗದು ವ್ಯವಹಾರವನ್ನು ಕಡಿಮೆಮಾಡಲು ಸರಕಾರ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದಿಂದ ಕೂಡಿದ ಬ್ಯಾಂಕಿಂಗ್ ವ್ಯವಹಾರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಮಾತ್ರವಲ್ಲ ತಮ್ಮ ಈ ವಿಚಾರವನ್ನು ಇತರರಿಗೂ ತಲುಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಾಲಂದಾ ಮಹಾವಿದ್ಯಾಲಯದ ಪ್ರಾಶುಪಾಲರಾದ ಡಾ| ಕೆ.ಕಮಲಾಕ್ಷ ಆಡಳಿತಾಧಿಕಾರಿ ಶಿವಕುಮಾರ್, ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯದರ್ಶಿ ವಿಕಾಸ್, ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯ ಶಿವರಾಜ್ ಮತ್ತು ಎನ್.ಎಸ್.ಎಸ್ ಘಟಕದ ಸದಸ್ಯರು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.