ಪೆರ್ಲ : ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಅಂಗವಾಗಿ, ಶಿಕ್ಷಣದಲ್ಲಿ ಸಾಮಾಜಿಕ ಸೇವೆಯ ಮೌಲ್ಯ ಎಂಬ ವಿಷಯದ ಬಗ್ಗೆ ಸರಕಾರಿ ಕಾಲೇಜು ಕಾಸರಗೋಡಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಭೂಮಿತ್ರ ಸೇನಾ ಕ್ಲಬ್ಬಿನ ಸಂಚಾಲಕರೂ ಆದ ಮುಹಮ್ಮದ್ ಆಲಿ ಕೆ. ಪೆರ್ಲ, ಸಮಾಜ ಬೆಳೆದರೆ ರಾಷ್ಟ್ರ ಬೆಳೆಯುವುದು, ಉತ್ತಮ ಸಮಾಜ ನಿರ್ಮಾಣಕ್ಕೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಶಂಕರ ಖಂಡಿಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶಿವಕುಮಾರ್ ಎಸ್, ರಾಧಾಕೃಷ್ಣ ಆಳ್ವ ಪೂವನಡ್ಕ ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಉಪನ್ಯಾಸಕರಾದ ಕಿಶನ್ ಪಿ, ಸುರೇಶ ಕೆ, ಗೀತ ಪಿ,ಮಾಲಿನಿ ಎನ್ , ಮಧುರವಾಣಿ ಬಿ, ಸುಂದರ ಬಿ, ಜಯಂತಿ ಪಿ, ವಿಶಾಲ ಎಮ್. ಆರ್, ಮಂಜುನಾಥ ಶೆಟ್ಟಿ ಪೆರ್ಲ, ಎನ್.ಎಸ್.ಎಸ್ ವಿದ್ಯಾರ್ಥಿಗಳಾದ, ಮೇಕ್ಸಿಮ್ ರೋಡ್ರಿಗಸ್ ವಿಕಾಸ್, ನಯನ, ಪ್ರಸೀನ ಸಿ.ಎಚ್, ಧನ್ಯ ಕೆ.ಪಿ, ಅರ್ಪಿತಾ ಮೊದಲಾದವರು ಉಪಸ್ಥಿತರಿದ್ದರು.