×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ರಾಷ್ಟ್ರೀಯ ಸೇವಾ ಯೋಜನೆ ಸಪ್ತದಿನ ಶಿಬಿರ ಉದ್ಘಾಟನೆ

ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರವು ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಉದ್ಘಾಟಿಸಿ ಇಂತಹ ಶಿಬಿರವು ಮಕ್ಕಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ವಿಕಸನ, ಸೇವಾಮನೊಭಾವ ಬೆಳೆಸಲು, ಸಹಬಾಳ್ವೆ ಮತ್ತು ಸಮಾಜಮುಖಿ ಅಬಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಣ್ಮಕಜೆ ಗ್ರಾಮ ಪಂಚಾಯತ್ತಿನ ಉಪಾಧ್ಯಕ್ಷರಾದ ಪುಟ್ಟಪ್ಪ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ| ಜಯಗೋವಿಂದ ಉಕ್ಕಿನಡ್ಕ ಭಾಗವಹಿಸಿದರು. ಪ್ರಾಂಶುಪಾಲರಾದ ಡಾ|ಕೆ.ಕಮಲಾಕ್ಷ ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು.

2

1

ಸವಿತಾ ಬಾಳಿಕೆ ಸದಸ್ಯರು ಮಂಜೇಶ್ವರ ಬ್ಲೋಕ್ ಪಂಚಾಯತು, ಉದಯ.ಬಿ ಅಧ್ಯಕ್ಷ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಎಣ್ಮಕಜೆ ಗ್ರಾಮ ಪಂಚಾಯತು, ಆಯೀಷ ಎ.ಎ ಅಧ್ಯಕ್ಷೆ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಎಣ್ಮಕಜೆ ಗ್ರಾಮ ಪಂಚಾಯತು, ಶಿವಕುಮಾರ್ ಮುಖ್ಯೋಪಾಧ್ಯಾಯರು, ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಬೇಂಗಪದವು, ಶಾಹುಲ್ ಹಮೀದ್ ಹಾಜಿ ಖಂಡಿಗೆ, ಅಧ್ಯಕ್ಷರು ಶಿಬಿರದ ವ್ಯವಸ್ಥಾಪನಾ ಸಮಿತಿ, ಶ್ರೀ ರಾಮಕೃಷ್ಣ ರೈ ಕುದ್ವ ಮಾಜಿ ಬ್ಲೋಕ್ ಪಂಚಾಯತು ಸದಸ್ಯರು, ಅಶ್ರಫ್ ಮರ್ತ್ಯ ಮಾಜಿ ಎನ್.ಎಸ್.ಎಸ್ ಯೋಜನಾಧಿಕಾರಿ, ಶ್ರೀ ಕೃಷ್ಣ ನಾಯ್ಕ್ ಪೆಲ್ತಾಜೆ, ನಿವೃತ್ತ ಮುಖ್ಯೋಪಾಧ್ಯಾಯರು, ಶಂಕರ ಮೂಲ್ಯ ಸೋಮಾಜೆ, ರಾಧಾಕೃಷ್ಣ ಆಳ್ವ ಪೂವನಡ್ಕ, ವೇಣುಗೋಪಾಲ ಭಟ್ ಸೋಮಾಜೆ, ಶ್ರೀಕೃಷ್ಣ ಭಟ್ ಪೆಲ್ತಾಜೆ ಮುಂತಾದವರು ಕಾರ್ಯಕ್ರಮಕ್ಕೆ ಶುಭಾಶಂಸನೆ ಸಮರ್ಪಿಸಿದರು.

ಅಶೋಕ ಮೊಟ್ಟಕುಂಜ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ವಿನೀಶಾ, ಮಲಯಾಳಂ ಉಪನ್ಯಾಸಕಿ ಉಪಸ್ಥಿತರಿದ್ದರು. ಶಾಂಭವಿ, ಉಪನ್ಯಾಸಕಿ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್ ವಂದಿಸಿದರು.

“ಸುಸ್ಥಿರ ಅಭಿವೃದ್ಧಿಗೆ ಬೇಕಾಗಿ ಸಮಾಜ ಸೇವೆ” ಎಂಬ ಧ್ಯೇಯವನ್ನು ಮುಂದಿರಿಸಿ ನಡೆದ ಶಿಬಿರದಲ್ಲಿ ಮುಖ್ಯವಾಗಿ ರಸ್ತೆ ನಿರ್ಮಾಣ, ಬಸ್ಸು ತಂಗುದಾಣ, ಕಾಲುದಾರಿ ದುರಸ್ತಿ, ವ್ಯಕ್ತಿತ್ವ ವಿಕಸನ ತರಗತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೋಲನಿ ಭೇಟಿ, ಶುಚಿತ್ವ, ಸಾಮುದಾಯ ಮೈತ್ರಿ ಸಂದೇಶ ಸಾರುವ ರ್‍ಯಾಲಿ ಮುಂತಾದ ಕಾರ್ಯಕ್ರಮಗಳನ್ನು ಶಿಬಿರಾರ್ಥಿಗಳು ನಡೆಸಿದರು.