×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಇಟ್ಟಿಪಳ್ಳ

ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಟ್ಟ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಿಂದ ಅನತಿ ದೂರದಲ್ಲಿ ಕಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಮನೋಹರವಾದ ಒಂದು ನೀರಿನ ಸಂಗ್ರಹವಿದೆ. ಈ ಮದಕಕ್ಕೆ ಪ್ರದೇಶವಾಸಿಗಳು “ಇಟ್ಟಿಪಳ್ಳ” ಎಂದು ಕರೆಯುತ್ತಾರೆ. ಇತಿಹಾಸ ಯಾವುದೇ ಇರಲಿ ಈ ಮದಕದಲ್ಲಿ ಏಪ್ರೀಲ್ ತಿಂಗಳಲ್ಲೂ ಬತ್ತದ ನೀರಿನ ಸಂಗ್ರಹ ವಿಜ್ಞಾನಕ್ಕೆ ಒಂದು ಸವಾಲಾಗಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಶಿಬಿರವನ್ನು ಹಮ್ಮಿಕೊಂಡ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಈ ಮದಕಕ್ಕೆ ಭೇಟಿ ಕೊಟ್ಟು ಶುಚಿಗೊಳಿಸಿದರು.

dsc06306

dsc06305

ಇಂತಹ ಪ್ರಕೃತಿ ನಿರ್ಮಿತ ಮದಕಗಳನ್ನು ಸಂರಕ್ಷಿಸುವುದು ಸಾಮಾಜಿಕ ಕಾರ್ಯಕರ್ತರ ಮುಖ್ಯ ಉದ್ದೇಶವಾಗಿರಬೇಕು. ಎನ್.ಎಸ್.ಎಸ್ ಘಟಕವು ಇದಕ್ಕೆ ಬದ್ಧವಾಗಿದೆ ಮಾತ್ರವಲ್ಲ ಪರಿಸರ ಕಾಳಜಿಯಿಂದ ಈ ಮದಕವನ್ನು ಪ್ರದೇಶವಾಸಿಗಳ ಸಹಾಯದಿಂದ ಸಂರಕ್ಷಿಸಲು ಎಲ್ಲಾರೀತಿಯ ಸಹಾಯ ಒದಗಿಸಲು ವಿದ್ಯಾರ್ಥಿಗಳು ಒಮ್ಮತದ ಪ್ರತಿಜ್ಞೆ ಮಾಡಿದರು. ನೀರಿನ ಬವಣೆಯಿಂದ ಕಷ್ಟ ಪಡುತ್ತಿರುವ ಈ ಪ್ರದೇಶದ ಜನರಿಗೆ ತಕ್ಕಮಟ್ಟಿಗೆ ಪರಿಹಾರವಾಗಿದೆ. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಅಶೋಕ್ ರೈ ಮೊಟ್ಟಕುಂಜ, ಉಮೇಶ ಭಂಡಾರಿ ಪೂವನಡ್ಕ, ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾz ಶಿವಕುಮಾರ್ ಎಸ್, ರಾಧಾಕೃಷ್ಣ ಆಳ್ವ ಪೂವನಡ್ಕ, ರಾಮಣ್ಣ ಪೂಜಾರಿ ಬಾಂಕನ , ಶಂಕರ ಪೂಜಾರಿ ಬೇಂಗಪದವು , ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್ ಸುಧಾಕರ, ಭವಿಷ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು ಜತೆಗಿದ್ದರು.