News & Events
D.V. Sadananda Gowda Visited Nalanda College
D.V. Sadananda Gowda the Minister of Law and Justice in the Gvernment of India has visited Nalanda College of Perla.
Recruitement of Teaching Staff
DETAILS OF MINIMUM ELIGIBILITY AND OTHER INFORMATION FOR THE RECRUITEMENT OF TEACHING STAFF (As per guidelines of Vivekananda Vidyavardhaka Sangha Puttur) Minimum qualification for direct recruitement to the post of Professor, Associate Professor, Assistant Professor Qualification for teaching posts will be laid down by the Univesity Grant Commission ( UGC ) and as adopted by
ನಾಲಂದದಲ್ಲಿ ಮತದಾನದ ಬಗ್ಗೆ ಜಾಗೃತಿ
ಕೇರಳದಲ್ಲಿ 16 ಮೇ 2016 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ‘ಜಾಗೃತಿ’ಯನ್ನು ಮೂಡಿಸುವ ಉದ್ದೇಶದಿಂದ ಕಣ್ಣೂರು ವಿಶ್ವವಿದ್ಯಾಲಯದ ಆದೇಶದಂತೆ ಪೆರ್ಲ ನಾಲಂದ ಮಹಾವಿದ್ಯಾಲಯದ ಮುಂದಾಳತ್ವದಲ್ಲಿ ದಿನಾಂಕ 31 ಮಾರ್ಚ್ 2016 ರಂದು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ನಡೆಯಿತು. ಭಾರತೀಯ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಉಳ್ಳವರು, ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಜಾತಿ, ಮತ, ವರ್ಗ ಭೇದವಿಲ್ಲದೆ ಯಾವುದೇ ಆಮಿಷಗಳಿಗೊಳಗಾಗದೆ ಮೇ 16 ರಂದು ನಡೆಯವ ಚುನಾವಣೆಯಲ್ಲಿ ಮತವನ್ನು ಚಲಾಯಿಸುತ್ತೇವೆ ಎಂಬ ಪ್ರತಿಜ್ಞೆಗೆ ವಿದ್ಯಾರ್ಥಿ ಮತದಾರರು
ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶಿಕ್ಷಣ
ನಾಲಂದ ಕಾಲೇಜಲ್ಲಿ ’ಶ್ರೀಮಾತಾ’ ಆಡಳಿತ ಕಚೇರಿ ನೂತನ ಕಟ್ಟಡ ಉದ್ಘಾಟನೆ ಮೌಲ್ಯಾಧಾರಿತ ಶಿಕ್ಷಣ ಯಾವ ಸಂಸ್ಥೆಯಲ್ಲಿ ಸಿಗುತ್ತದೆಯೊ ಅಲ್ಲಿ ಉತ್ತಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ. ಕೇರಳ ಗಡಿ ಭಾಗದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ನಾಲಂದ ಸಂಸ್ಥೆಯಿದ್ದು ಮೌಲ್ಯಾಧಾರಿತ ಶಿಕ್ಷಣಕ್ಕೆ ಅಗತ್ಯ ಒತ್ತು ನೀಡುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವುದೆಂದರೆ ಅದೊಂದು ಸುಯೋಗ ಎಂದು ಕಣ್ಣೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ಅಬ್ದುಲ್ ಖಾದರ್ ಹೇಳಿದರು. ಅವರು ಪೆರ್ಲದ ನಾಲಂದ ಮಹಾವಿದ್ಯಾಲಯದ ಆಡಳಿತ ಕಚೇರಿಯ ನೂತನ
ಯಮದೂತನಾದ ಅರ್ಬುದ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ದಿನಾಂಕ 4 ಫೆಬ್ರವರಿಯಂದು ’ವಿಶ್ವ ಅರ್ಬುದ ದಿನ’ವನ್ನು ಆಚರಿಸಲಾಯಿತು. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ಇಂತಹ ಮಾರಕ ರೋಗಗಳು ಮಾನವನನ್ನು ಭಾದಿಸುತ್ತದೆ. ಇದರ ಬಗ್ಗೆ ನಾವು ಜಾಗೃತರಾಗಬೇಕು ಎಂದು ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯಾದ ಖದೀಜತ್ತುಲ್ ಬುಶ್ರ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆ ಮಾತನಾಡುತ್ತಾ ಮೊದಲ ಹಂತದಲ್ಲಿ ಅರ್ಬುದ ರೋಗ ಎಂದು ನಿರ್ಣಯಿಸಲು ಸಾಧ್ಯವಾದರೆ ಅದನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಬಹುದಾಗಿದೆ ಮತ್ತು
ಸುಖ ಜೀವನಕ್ಕೆ ತೇವ ಭರಿತ ಭೂಮಿ
ಪೆರ್ಲ : ನಾಲಂದ ಕಾಲೇಜಿನಲ್ಲಿ ಎನ್.ಎಸ್.ಎಸ್ ವತಿಯಿಂದ ಅಂತಾರಾಷ್ಟ್ರೀಯ ತೇವ ಭರಿತ ಭೂಪ್ರದೇಶ ದಿನ ವನ್ನು ಆಚರಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಕಾಲೇಜಿನ ಭೂಮಿಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಸಾಜಿದ ಸಿ.ಎಚ್‌ರವರು ತೇವ ಭರಿತ ಭೂಮಿಯ ಮಹತ್ವಗಳನ್ನು ತಿಳಿಸಿದ್ದಲ್ಲದೆ ಇಂದು ಅದನ್ನು ನಾಶ ಮಾಡುತ್ತಿದ್ದೇವೆ, ಅದರ ಸಂರಕ್ಷಣೆ ಮಾಡಿದರೆ ಮಾತ್ರ ನಮ್ಮ ಬದುಕು ಸುಖಮಯವಾಗಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕತೆ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆಯವರು ಎಲ್ಲಾ ಜೀವಿಗಳಿಗೂ ತೇವಭರಿತ ಭೂಪ್ರದೇಶ ಅತ್ಯಾವಶ್ಯಕ. ಅದನ್ನು ಯಾವುದೇ ರೀತಿಯಲ್ಲಿ ಹಾಳುಗೆಡಹದೆ ಸಂರಕ್ಷಿಸಿಕೊಂಡು
ಗಣರಾಜ್ಯೋತ್ಸವ ಕಾರ್ಯಕ್ರಮ
ನಾಲಂದ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ್ ಕೆ. ಕಾಲೇಜಿನ ಆಡಳಿತಾಧಿಕಾರಿ ದ್ವಜರೋಹಣಗೈದರು. ಶ್ರೀ ಅಭಿಲಾಷ್ ಟಿ. ಕೆ, ಶಂಕರ್ ಖಂಡಿಗೆ ಉಪಸ್ಥಿತರಿದ್ದರು.
ಜಿಯೋ ಫಾರಂ-2016 : ’ಜನವರಿ ತಿಂಗಳ ಆಕಾಶ’
ಪೆರ್ಲ: ಕಾಸರಗೋಡು ಜಿಲ್ಲಾಮಟ್ಟದಲ್ಲಿರುವ ಹೈಯರ್ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೆರ್ಲದ ನಾಲಂದ ಕಾಲೇಜಿನ ಬಗ್ಗೆ ಮತ್ತು ಭೂಮಿಶಾಸ್ತ್ರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜಿನ ಸ್ನಾತಕೋತ್ತರ ಪದವಿ ಭೂಮಿಶಾಸ್ತ್ರ ವಿಭಾಗವು, ಎರಡು ದಿನಗಳ ಸಹವಾಸ ಕಾರ್ಯಾಗಾರ ’ಜಿಯೋ ಫಾರಂ – 2016’ ನ್ನು ನಾಲಂದ ಕಾಲೇಜಿನಲ್ಲಿ ವಿವಿಧ ಕಲಿಕಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅಚ್ಚುಕಟ್ಟಾಗಿ ಆಯೋಜಿಸಿತ್ತು. ಸುಮಾರು ನೂರರಷ್ಟು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದರು. ’ಜನವರಿ ತಿಂಗಳ ಆಕಾಶ’ ಎಂಬ ಹೆಸರಿನಲ್ಲಿ ಆಕಾಶ ವೀಕ್ಷಣೆಗೆ ಆವಕಾಶ
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಅನುಸರಣೀಯ
ಪೆರ್ಲ: ’ಮಾನವನಲ್ಲಿ ಕೀಳರಿಮೆ ಇರಬಾರದು, ತನ್ನ ಗುರಿಯಕಡೆಗೆ ಸದಾ ಸಾಗುತ್ತಿರಬೇಕು, ಹೆದರಬೇಡ ಶಕ್ತಿವಂತನಾಗು, ಒಳ್ಳೆಯವನಾಗಿರು, ಒಳ್ಳೆಯದನ್ನೇ ಮಾಡು’ ಮುಂತಾದ ವಿವೇಕಾನಂದರ ವಿಚಾರ ಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ನರಸಿಂಹ ಭಟ್ ಸೂರಂಬೈಲು ಕರೆನೀಡಿದ್ದಾರೆ. ಅವರು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಜೀವನ ಕಲೆ ದೊಡ್ಡಕಲೆ ಅದು ಕಲಿಸಿಬರುವುದಲ್ಲ ಅದನ್ನು ನಾವು ಮೈಗೂಡಿಸಿಕೊಳ್ಳಬೇಕುಎಂದ ಅವರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಮಾನವರಾದ