News & Events
ಸಾಹಿತ್ಯ ಸಂಘ ಉದ್ಘಾಟನೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಸಾಹಿತಿಯೂ ಆದ ಡಾ| ಹರಿಕೃಷ್ಣ ಭರಣ್ಯ ನೆರವೇರಿಸಿದರು. ಕಾಸರಗೋಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ, ಸಂಗೀತ, ಭಾಷಾ ವೈವಿಧ್ಯಗಳು ಜಗತ್ತಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಡೀ ಜಗತ್ತು ಇಲ್ಲಿದೆ. ಇಂತಹ ಶ್ರೀಮಂತ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಯಾರೂ ಒಮ್ಮೆಲೇ ದೊಡ್ಡ ಕವಿಯೋ ಸಾಹಿತಿಯೋ ಆಗಲಾರರು. ಶಾಲಾ ಮಟ್ಟದಲ್ಲಿ ಇದನ್ನು ರೂಢಿಸಿಕೊಂಡು ಬೆಳೆಯ ಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು
ಸಂಖ್ಯಾಶಾಸ್ತ್ರದ ಪರಿಮಾಣಗಳ ಬಳಕೆ
ಜೂನ್ 27, 2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗವು ’ಸಂಖ್ಯಾಶಾಸ್ತ್ರದ ಪರಿಮಾಣಗಳ ಬಳಕೆ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು. ಸಂಪನ್ಮೂಲ ವ್ಯಕ್ತಿಯಾಗಿ ಕಣ್ಣೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧಕಿ ಶ್ರೀಮತಿ ಉದಯ.ಎ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಖ್ಯಾಶಾಸ್ತ್ರವು ನಮ್ಮ ಜೀವನಕ್ಕೆ ಅಗತ್ಯವಾದ ಒಂದು ಮಾನದಂಡ ಎಂದರು. ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ ಮತ್ತು ಸ್ಟಾಫ್ ಸೆಕ್ರೆಟರಿ ಕೆ.ಕೇಶವಶರ್ಮ ಶುಭಹಾರೈಸಿದರು. ಉಪನ್ಯಾಸಕಿ ಕು| ಶಿಲ್ಪಾ
ಯೋಗದಿಂದ ರೋಗ ಮುಕ್ತ – ಕೋಳಾರು ಸತೀಶ್ಚಂದ್ರ ಭಂಡಾರಿ
ಅಂತಾರಾಷ್ಟ್ರೀಯ ಯೋಗ ದಿನವನ್ನು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೋಳಾರು ಸತೀಶ್ಚಂದ್ರ ಭಂಡಾರಿಯವರು ಮಾತನಾಡುತ್ತ ಜೂನ್ 21 ಎಂದರೆ ದೀರ್ಘ ಹಗಲಿರುವ ದಿವಸ ಅದೇ ದಿನವನ್ನು ಯೋಗದಿನವಾಗಿ ಆಚರಿಸುವಂತೆ ಮೋದಿಯವರು ತಿಳಿಸಿದರು, ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಚಾರ ಮಾಡಿದರು. ಆದರೆ ಯೋಗ ಎಂಬುದು ದಿನಾಚರಣೆಯನ್ನು ಆಚರಿಸುವಲ್ಲಿಗೆ ನಿಲ್ಲಬಾರದು ಅದು ಜೀವನದುದ್ದಕ್ಕೂ ನಡೆಸಬೇಕಾದ ಕ್ರಿಯೆ. ದೈಹಿಕ ಮಾನಸಿಕ ಶುಚಿತ್ವದಿಂದ ಜೀವನದಲ್ಲಿ ಯೋಗ ಮಾಡುತ್ತ ಬಂದರೆ ನಾವು ರೋಗ ಮುಕ್ತರಾಗುತೇವೆ ಎಂದರು. ಕಾಲೇಜಿನಲ್ಲಿ ಒಂದು ವಾರಗಳ ಯೋಗ ಶಿಬಿರವನ್ನು ನಡೆಸಿದ
ಅಂತರಾಷ್ಠ್ರೀಯ ಯೋಗ ದಿನಾಚರಣೆ
ಅಂತರಾಷ್ಠ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಒಂದು ವಾರದ ಯೋಗ ಶಿಬಿರ ಆರಂಭವಾಗಿದೆ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷರು ಶಿಬಿರಕ್ಕೆ ಚಾಲನೆ ನೀಡಿದರು. ಯೋಗಾಚಾರ್ಯರಾದ ಆನೆಮಜಲು ಶ್ರೀ ವಿದ್ಯಾಧರರು ಯೋಗಾಸನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ಶಿಬಿರ ಪ್ರಾರಂಭಿಸಿದರು. ಉಪನ್ಯಾಸಕ ಕೆ.ಕೇಶವಶರ್ಮ ಯೋಗಾಚಾರ್ಯರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಮತ್ತು ಶ್ರೀನಿಧಿಯವರು ಶಿಬಿರದ ಜವಾಬ್ದಾರಿಯನ್ನು ವಹಿಸಿಕೊಂಡರು. ಉಪನ್ಯಾಸಕರು ಮತ್ತು 40 ಕ್ಕೂ ಮಿಕ್ಕಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
One Day Seminar on “COMMON DESEASES IN RAINY SEASON”
A Seminar on, Common Diseases in Rainy Season was held at Nalanda college Auditorium on 15th June, 2016, under the auspices of the Department of Geography. Mr. Abhilash T.K. Head of the Department welcomed the gathering. The Principal Dr. K. Kamalaksha presided over the function. Sri. Suresh, District Malaria Officer, Kasaragod talked on the topic,
ಶಿಶುಮಂದಿರಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಯುತ್ತದೆ – ಡಾ| ಪ್ರಭಾಕರ ಭಟ್ ಕಲ್ಲಡ್ಕ
ಪೆರ್ಲ : ಒಂದು ವಸ್ತುವನ್ನು ಪರೀಕ್ಷಿಸಿ ಅದರಲ್ಲಿರುವ ವಿಶೇಷತೆಗಳನ್ನು ಗ್ರಹಿಸುವ ವೈಜ್ಞಾನಿಕ ಮನೋಧರ್ಮ ಶಿಶುಮಂದಿರದಲ್ಲಿ ಕಲಿಯುವ ಮಕ್ಕಳಲ್ಲಿ ಬೆಳೆಯುತ್ತದೆ. ಇದು ವಿಜ್ಞಾನಿ ಮನೋಧರ್ಮ. ಮಗು ಅದರಷ್ಟಕ್ಕೆ ನಲಿಯುತ್ತ ಕಲಿಯಬೇಕು. ಕಲಿಯುತ್ತ ಬೆಳೆಯಬೇಕು. ಅದಕ್ಕಾಗಿ ಮಗುವನ್ನು ಎಳವೆಯಲ್ಲಿ ನಿರ್ಬಂಧಿಸಬಾರದು. ಅವರ ಇಚ್ಛಾನುಸಾರ ಬೆಳೆಯಲು ಬಿಟ್ಟಾಗ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ನಮ್ಮ ಶಿಶುಮಂದಿರದ ಪರಿಕಲ್ಪನೆಯೆ ಅಂತಹುದು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ಪೆರ್ಲ ನಾಲಂದ ಮಹಾ ವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ ’ವಿವೇಕಾನಂದ ಶಿಶುಮಂದಿರ’ ದ
ವಿಶ್ವ ಪರಿಸರ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎನ್.ಎಸ್.ಎಸ್ ಮತ್ತು ಭೂಮಿತ್ರ ಸೇನೆ ಕ್ಲಬ್ ವತಿಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ವಿದ್ಯಾಲಯದ ಪರಿಸರವನ್ನು ಶುಚಿಗೂಳಿಸಿ ಸಸಿಗಳನ್ನು ನಟ್ಟು ಪರಿಸರದಲ್ಲಿ ಹಸಿರು ತುಂಬಲು ನೆರವಾದರು. ಅನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಕೆ. ಕಮಲಾಕ್ಷರು ಯುವ ಜನಾಂಗ ಪ್ರಕೃತಿಯನ್ನು ಪ್ರೀತಿಸಿ, ರಕ್ಷಿಸಿದರೆ ಮುಂದೆ ಸಕಲ ಜೀವರಾಶಿಗಳಿಗಾಗುವ ದುರಂತವನ್ನು ತಪ್ಪಿಸಬಹುದು ಎಂದರು. ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ. ಶಿವಕುಮಾರರು ಮಾತಾನಾಡುತ್ತ ಮಾನವ ಪ್ರಕೃತಿಗೆ ವಿಷವನ್ನು ಬಿಡುತ್ತಾನೆ ಆದರೆ ಅದನ್ನು ಸ್ವೀಕರಿಸಿ ಸಸ್ಯಗಳು ಮಾನವನಿಗೆ
ವಾರ್ಷಿಕ ಮಹಾಸಭೆ
ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ವಾರ್ಷಿಕ ಮಹಾಸಭೆ ಮೇ 26 ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ನಾಲಂದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಆನೆಮಜಲು ವಿಷ್ಣು ಭಟ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ವರದಿ ವಾಚನ ಮಾಡಿದರು. ಖಜಾಂಜಿ ಶ್ರೀಯುತ ಗೋಪಾಲ ಚೆಟ್ಟಿಯಾರ್ ಲೆಕ್ಕಪತ್ರ ಮಂಡಿಸಿದರು. ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ಒಂದು ವರ್ಷದ ಸಿಂಹಾವಲೋಕನದಲ್ಲಿ ಮಹಾವಿದ್ಯಾಲಯ ಕಂಡ ಕಷ್ಟ ಸುಖಗಳನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಆದರ್ಶ ಎಂಬಂತೆ ಬೆಳೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
D.V. Sadananda Gowda Visited Nalanda College
D.V. Sadananda Gowda the Minister of Law and Justice in the Gvernment of India has visited Nalanda College of Perla.