×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಯಮದೂತನಾದ ಅರ್ಬುದ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ದಿನಾಂಕ 4 ಫೆಬ್ರವರಿಯಂದು ’ವಿಶ್ವ ಅರ್ಬುದ ದಿನ’ವನ್ನು ಆಚರಿಸಲಾಯಿತು. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ಇಂತಹ ಮಾರಕ ರೋಗಗಳು ಮಾನವನನ್ನು ಭಾದಿಸುತ್ತದೆ. ಇದರ ಬಗ್ಗೆ ನಾವು ಜಾಗೃತರಾಗಬೇಕು ಎಂದು ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯಾದ ಖದೀಜತ್ತುಲ್ ಬುಶ್ರ ಅವರು ಹೇಳಿದರು.

20160204_155355

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆ ಮಾತನಾಡುತ್ತಾ ಮೊದಲ ಹಂತದಲ್ಲಿ ಅರ್ಬುದ ರೋಗ ಎಂದು ನಿರ್ಣಯಿಸಲು ಸಾಧ್ಯವಾದರೆ ಅದನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಬಹುದಾಗಿದೆ ಮತ್ತು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿದರೆ ತಡೆಗಟ್ಟಬಹುದು ಎಂದರು. ಉಪನ್ಯಾಸಕರಾದ ಶ್ರೀ ಕೇಶವ ಶರ್ಮ ಮತ್ತು ಶ್ರೀ ವಿಷ್ಣುಪ್ರಕಾಶ್, ಎನ್.ಎಸ್. ಎಸ್ ಕಾರ್‍ಯದರ್ಶಿಗಳಾದ ಮಾಕ್ಸಿಮ್ ರೋಡ್ರಿಗಸ್, ಕು. ಅರ್ಪಿತ ಉಪಸ್ಥಿತರಿದ್ದರು.