News & Events
succeed in exam through stress management
Commerce and management department organized session on how to succeed in exam and stress management
Kargil Vijay Diwas
ನಮ್ಮ ದೇಶದ ಗಡಿಗಳಲ್ಲಿ ಹಗಲು-ರಾತ್ರಿ ಮಳೆ-ಚಳಿಯನ್ನು ಲೆಕ್ಕಿಸದೆ ದೇಶ ರಕ್ಷಣೆಯ ಹೊಣೆ ಹೊತ್ತ ಸೈನಿಕರು ಸದಾ ಎಚ್ಚರದಲ್ಲಿರುವುದರಿಂದ ನಾವು ನಿರ್ಭೀತಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಪೆರ್ಲ ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಶೇಣಿ ಹೇಳಿದರು. ಕಾಲೇಜು ಎನ್ನೆಸ್ಸೆಸ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ದೇಶರಕ್ಷಣೆಯ ಇತಿಹಾಸದಲ್ಲಿ ಕಾರ್ಗಿಲ್ ಘಟನೆ ಚಿರ ಸ್ಮರಣೀಯ ಹಾಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ. ಯುದ್ಧದ ಸಂದರ್ಭದಲ್ಲಿ ಭಾರತೀಯ ಸೈನಿಕರು ತೋರಿದ ಸಾಹಸವನ್ನು ಯಾರಿಂದಲೂ ಮರೆಯಲಾಗದು.
Congratulations
ಪೆರ್ಲ ನಾಲಂದ ಕಾಲೇಜು ಆರ್ಟ್ಸ್ ಮತ್ತು ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಆಶ್ರಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಹಳೆ ವಿದ್ಯಾರ್ಥಿನಿ ಆಯಿಶತ್ತುಲ್ ಶಂಸೀರಾ ಅವರನ್ನು ಅಭಿನಂದಿಸಲಾಯಿತು. ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕಿನಡ್ಕ, ಪ್ರಿನ್ಸಿಪಾಲ್ ಡಾ. ಕಿಶೋರ್ ಕುಮಾರ್ ರೈ ಶೇಣಿ, ಸಿಬ್ಬಂದಿ ಕಾರ್ಯದರ್ಶಿ ಶಂಕರ್ ಖಂಡಿಗೆ, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಶ್ರೀನಿಧಿ ಅಭಿನಂದಿಸಿದರು. ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುರೇಶ್ ಕೆ.ಎಂ.ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ನಿವೇದಿತಾ
World Population Day
ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಜಾಗತಿಕ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಅಧ್ಯಾಪಕ ಶ್ರೀ ನಾರಯಣ ಶೆಟ್ಟಿ ಜಿ.ಎಚ್.ಎಸ್.ಎಸ್ ಅಂಗಡಿಮೊಗರು ಮಾತನಾಡಿ, ಅಂಧವಿಶ್ವಾಸ, ಜನನ ದರ ಹೆಚ್ಚಳ-ಮರಣ ದರ ಕಡಿಮೆಯಾಗುವ ಮೂಲಕ ಜನಸಂಖ್ಯಾ ಸಮಸ್ಯೆ ಉಂಟಾಗುತ್ತಿದೆ ಎಂದು ವ್ಯಕ್ತಪಡಿಸಿದರು. ಹಾಗು ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಂವಹನ ಮಾಡುವ ಮೂಲಕ ತಿಳುವಳಿಕೆ ಮೂಡಿಸಿದರು. ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸಂಖ್ಯಾ ಸ್ಪೋಟದಿಂದ ಆರ್ಥಿಕತೆಯ ಮೇಲೆ ಉಂಟಾಗುವ
Inauguration of New Building and Smart Classroom
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಿದ ನಾಲಂದ ಮಹಾವಿದ್ಯಾಲಯದ ನೂತನ ಕಟ್ಟಡ ಮತ್ತು ನಿಟ್ಟೆ ವಿಶ್ವವಿದ್ಯಾಲಯ ಪರಿಗಣಿಸಲ್ಪಟ್ಟ ಪ್ರಾಯೋಜಿತ ಸ್ಮಾರ್ಟ್ ಕ್ಲಾಸ್ ರೂಮ್ಗಳ ಉದ್ಘಾಟನಾ ಸಮಾರಂಭ.