ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೀಪುಲ್ಸ್ ಕಾಲೇಜು ಮುನ್ನಾಡು ಇದರ ಬಿ.ಬಿ.ಎ. ವಿಭಾಗದ ಮುಖ್ಯಸ್ಥ ಮತ್ತು ಜೆ.ಸಿ.ಐ ಯ ತರಬೇತುದಾರ ಶ್ರೀ ಪುಷ್ಪಾಕರ ಬಂಡಿಚ್ಚಾಲ್‌ರವರು ಕಾರ್ಯಗಾರ ಉದ್ಘಾಟಿಸಿ ಮಾನವನು ಬದುಕಿನಲ್ಲಿ ಯಶಸ್ಸು ಗಳಿಸಬೇಕಾದರೆ ಉತ್ತಮ ಗುರಿ, ಪರಿಶ್ರಮ, ಶ್ರಧ್ಧೆ ಅತೀ ಅಗತ್ಯ ಸಮಾಜ ಸೇವೆಯ ಮೂಲಕ ಸಂಬಂಧಗಳು ಬಲಗೊಳ್ಳುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮತ್ತು ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆಯವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ಸಮಾಜಸೇವೆಗೆ ತೊಡಗಿಸಿಕೊಳ್ಳಲು ಇಂತಹಾ ಕಾರ್ಯಾಗಾರಗಳು ಅತೀ ಅಗತ್ಯ. ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು. ಮಾಜಿ ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್.ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿತೇಶ್ ಸ್ವಾಗತಿಸಿ, ಅರ್ಪಿತಾ ವಂದಿಸಿದರು ರಾಹುಲ್.ಬಿ.ಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಭಾಗವಹಿಸಿದರು.