ಮಾನವ ಸಿಟ್ಟುಗೊಂಡಾಗ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿರುವುದು ಹೀರೋಶಿಮಾ ಮತ್ತು ನಾಗಸಾಕಿ ಎಂಬುದಾಗಿ ಪೆರ್ಲ ನಾಲಂದ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಲ್ಲಿ ನಡೆದ ಹೀರೋಶಿಮಾ ನಾಗಸಾಕಿ ದಿನಾಚರಣೆಯಲ್ಲಿ ಮಾತನಾಡುತ್ತ ಇಂಗ್ಲೀಷ್ ಉಪನ್ಯಾಸಕಿ ಶಶಿರೇಖಾರವರು ಅಲ್ಲಿಯ ದಾರುಣತೆಯನ್ನು ತಿಳಿಸಿದರು.
ಎರಡನೇ ಮಹಾಯುದ್ಧವು ಅಣುಬಾಂಬ್ ಪ್ರಯೋಗಿಸುವುದರ ಮೂಲಕ ಕೊನೆಗೊಂಡಿತು. ಅಂದಿನಿಂದ ಅನಂತರ ವಿಶ್ವದ ಹೆಚ್ಚಿನ ರಾಷ್ಟ್ರಗಳು ಯುದ್ಧ ಬೇಡ, ಶಾಂತಿ ಬೇಕು ಎಂದು ಅಣ್ವಸ್ತ್ರ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಿದವು. ಮಾನವನ ಬದುಕು ಕ್ಷಣಿಕ, ಯುದ್ಧದಲ್ಲಿ, ದ್ವೇಷದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಾಂತಿ, ಪ್ರೀತಿಗಳಿಂದ ಎಲ್ಲವನ್ನೂ ಗಳಿಸಬಹುದು ಉಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ನುಡಿದರು.
ಎನ್ ಎಸ್ ಎಸ್ ಯೋಜನಾಧಿಕಾರಿ ಉಪನ್ಯಾಸಕ ಶಂಕರ ಖಂಡಿಗೆಯವರು ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿನಿ ಕೃಪಾ ಕೃಷ್ಣನ್ ಸ್ವಾಗತಿಸಿ, ಅಮೃತಾ ವಂದಿಸಿದರು. ಎನ್ ಎಸ್ ಎಸ್ ಕಾರ್ಯದರ್ಶಿ ನಯನಾ ಕಾರ್ಯಕ್ರಮ ನಿರೂಪಿಸಿದರು.