×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದದಲ್ಲಿ ರಕ್ತದಾನಿಗಳ ದಿನ

ನಾಲಂದ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬಿನ ನೇತೃತ್ವದಲ್ಲಿ ವಿಶ್ವರಕ್ತದಾನಿಗಳ ದಿನವನ್ನು ಆಚರಿಸಲಾಯಿತು. ರಕ್ತದಾನದ ಮಹತ್ವ ಹಾಗೂ ಈ ವರ್ಷದ ದ್ಯೇಯವಾಕ್ಯವಾದ “ರಕ್ತ ಕೊಡು, ಈಗ ಕೊಡು, ಆಗಾಗ ಕೊಡು” ಎಂಬುದರ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.

ರಕ್ತದಾನ ಮಹಾದಾನ ಮಾತ್ರವಲ್ಲ ಅನ್ನದಾನಕ್ಕಿಂತಲೂ ಶ್ರೇಷ್ಟ ಹಾಗೂ ರಕ್ತದಾನದ ಮೂಲಕ ಒಂದು ಜೀವ ಉಳಿಸುವ ಮಹತ್ಕಾರ್ಯ ಸಾಧಿಸಬಹುದು, ರಕ್ತದಾನ ಮಾಡುವುದರಲ್ಲಿ ಕೊಡುವವನಿಗೂ ಹಾಗು ಪಡೆಯುವವನಿಗೂ ಪ್ರಯೋಜನವಿದೆ ಎಂದು ಕನ್ನಡ ವಿಭಾಗದ ಉಪನ್ಯಾಸಕರಾದ ಕೇಶವ ಶರ್ಮ ಹೇಳಿದರು.

Nss-june

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿಯಾದ ಶಂಕರ ಖಂಡಿಗೆ, ಸುರಕ್ಷಿತ ರಕ್ತವು ಸುರಕ್ಷಿತ ಜೀವನಕ್ಕೆ ಅಗತ್ಯ ಮಾತ್ರವಲ್ಲದೇ ಒಬ್ಬ ವ್ಯಕ್ತಿಯ ಕ್ಲಿಷ್ಟಕರ ಆರೋಗ್ಯ ಪರಿಸ್ಥಿತಿಯಲ್ಲಿ ರಕ್ತದ ಅಗತ್ಯ ಅವನ ಜೀವ ಉಳಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿ ವಿಕಾಸ್, ಪ್ರದೀಪ್, ಮೊದಲಾದವರು ಭಾಗವಹಿಸಿದರು. ಅರ್ಥಶಾಸ್ರ ವಿಭಾಗದ ನಯನಶ್ರೀ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಅರ್ಪಿತಾ ವಂದಿಸಿದರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಅಖಿಲೇಶ್ ಕಾರ್ಯಕ್ರಮ ನಿರೂಪಿಸಿದರು.