ಕಣ್ಣೂರು ವಿಶ್ವವಿದ್ಯಾನಿಲಯದ 2016-17 ೭ನೇ ವರ್ಷದ ಕಲೋತ್ಸವವು ಇತ್ತೀಚೆಗೆ ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜು, ಪೊವ್ವಲ್‌ನಲ್ಲಿ ನಡೆಯಿತು. ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವಿಕಾಸ್ (ದೇವೇಂದ್ರ), ಪ್ರಜ್ಞಾ(ಅಗ್ನಿ), ಗಿರೀಶ್ (ವರುಣ), ಅರ್ಪಿತ್(ನರಕಾಸುರ), ಅಭಿಲಾಷ್(ಮುರಾಸುರ), ನಿರಂಜನ್ ಬಲ್ಲುಲಾಯ(ಕೃಷ್ಣ), ಸಾಗರ್(ಸತ್ಯಭಾಮ), ಶರತ್ ಕುಮಾರ್ ಮತ್ತು ಶರ್ಮಿತಾ (ದೂತರು), ಇವರು ’ನರಕಾಸುರ ಮೋಕ್ಷ’ ಎಂಬ ಕಥಾಭಾಗವನ್ನು ಆಡಿ ತೋರಿಸಿ ಜನಮೆಚ್ಚುಗೆಗೆ ಪಾತ್ರರಾದರು.
ಇವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಶಂಕರನಾರಾಯಣ ಹೊಳ್ಳ, ಆಡಳಿತಾಧಿಕಾರಿ ಕೆ.ಶಿವಕುಮಾರ್, ಸ್ಟಾಫ್ ಕಾರ್ಯದರ್ಶಿ ಕೆ. ಕೇಶವ ಶರ್ಮ, ಕಾಲೇಜಿನ ಫೈನ್ ಆರ್ಟ್ಸ್ ಕ್ಲಬ್ ಕನ್ವೀನರ್ ಶಾಂಭವಿ, ಯಕ್ಷಗಾನದ ಜವಾಬ್ದಾರಿ ವಹಿಸಿದ ಶಂಕರ ಖಂಡಿಗೆ, ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು. ಯಕ್ಷಗಾನಕ್ಕೆ ನಾಟ್ಯಗುರುವಾಗಿ ಬಂದು ಸಹಕರಿಸಿದ ಬಾಲಕೃಷ್ಣ ಪೂಜಾರಿ, ಪೂರ್ಣಸಹಕಾರ ನೀಡಿದ ಶ್ರೀ ಸತೀಶ್ ಪುಣಿಂಚಿತ್ತಾಯ ಪೆರ್ಲ, ಹಿಮ್ಮೇಳದಲ್ಲಿ ಸಹಕರಿಸಿದ ಯೋಗೀಶ್ ಕಡಂಬಳಿತ್ತಾಯ, ಶ್ರೀಧರ ಎಡಮಲೆ, ಗಿರೀಶ್ ಮುಳ್ಳೇರಿಯ, ಮುರಹರಿ ವಿಟ್ಲ ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.