×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

’ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆಯಿಂದ ಸುಸ್ಥಿರ ಅಭಿವೃದ್ಧಿ ಹಾಗೂ ಜೀವವೈವಿಧ್ಯಗಳ ಅಸ್ತಿತ್ವ’ ಎಂಬ ಸಂದೇಶದೊಂದಿಗೆ ಜೀವ ಜಲ ಕಿರುಚಿತ್ರಕ್ಕೆ ಚಾಲನೆ.

ಪೆರ್ಲ: ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ – ಪ್ರಾಕೃತಿಕ ನೀರಿನ ಮೂಲಗಳಾದ ತೋಡು, ಕೆರೆ, ಹಳ್ಳಗಳ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ತೋಡುಗಳಿಗೆ ವಿವಿಧ ಶೈಲಿಗಳಲ್ಲಿನ ತಡೆ ನಿರ್ಮಾಣ, ತಡೆಗಳ ಮೂಲಕ ಸಂಗ್ರಹಿದ ನೀರಿನ ಉಪಯೋಗ, ಕೆರೆಗಳ ಸಂರಕ್ಷಣೆ, ಕೃಷಿ ಚಟುವಟಿಕೆಗಳಲ್ಲಿ ನೀರಿನ ಸದ್ಭಳಕೆ ,ಮುಂತಾದ ವಿಷಾಯಾಧರಿತ ಕಿರು ಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ : ಶಂಕರನಾರಾಯಣ ಹೊಳ್ಳ ಚಾಲನೆ ನೀಡಿದರು. ಸ್ಥಳೀಯ ತೋಡುಗಳ ಉಗಮ ಹಾಗೂ ಅವುಗಳ ಹರಿಯುವಿಕೆಯ ವಿವಿಧ ಪ್ರದೇಶಗಳ ವೈವಿಧ್ಯತೆ ಮತ್ತು ಹನಿಗೂಡಿ ಹಳ್ಳ ಎಂಬಂತೆ ಅಂತಿಮವಾಗಿ ಸಮುದ್ರ ಸೇರುವ ತನಕ ತೋಡು, ನದಿಗಳ ಅಧ್ಯಯನ ಹಾಗೂ ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ ಮಾಡಬೇಕಾಗಿದೆ ಎಂದು ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು.

Short-movie

ಭೂಮಿಯ ಅಂತರ್ಜಲ ಮಟ್ಟ ಶೀಘ್ರ ಗತಿಯಲ್ಲಿ ಕುಸಿಯುತ್ತಿರುವುದು ಜೀವ ವೈವಿಧ್ಯಗಳ ಅಸ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆಯಿಂದ ಸುಸ್ಥಿರ ಅಭಿವೃದ್ಧಿ ಹಾಗೂ ಜೀವ ವೈವಿಧ್ಯಗಳ ಅಸ್ತಿತ್ವ ಸಾಧ್ಯ – ನೀರಿನ ಮೂಲ ಹಾಗೂ ಹರಿಯವಿಕೆಯ ಪ್ರಕಾರಗಳಾದ ತೋಡು, ಕೆರೆ, ಹಳ್ಳಗಳ ಸಂರಕ್ಷಣೆ, ಮಳೆನೀರು ಸಂಗ್ರಹದಿಂದ ನೀರಿನ ಸದ್ಭಳಕೆಯತ್ತ ವಿದ್ಯಾರ್ಥಿಗಳು, ಕೃಷಿಕರನ್ನೊಳಗೊಂಡ ಜನ ಸಮೂಹವನ್ನು ಪ್ರೇರೆಪಿಸುವುದು, ಪ್ರೋತ್ಸಾಹಿಸುವುದು ಅತ್ಯಗತ್ಯ ಎಂದು ಜೀವಜಲ ಕಿರು ಚಿತ್ರದ ನಿರ್ದೇಶಕ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್ ಮೊಟ್ಟಕುಂಜ ಅವರು ಅಭಿಪ್ರಾಯಪಟ್ಟರು.

ಚಿತ್ರೀಕರಣವನ್ನು ಏತಡ್ಕ, ನೇರಪ್ಪಾಡಿ, ಕೀರಿಕ್ಕಾಡು, ಕೂಟೇಲು, ಕಜಂಪಾಡಿ ಮುಂತಾದ ಪ್ರದೇಶಗಳಲ್ಲಿ ನಡೆಸಲಾಗುವುದು, ಕೆರೆಗಳ ಸಂದರ್ಶನ ಹಾಗೂ ಪರಿಣತರಿಂದ ಮಾಹಿತಿ ಸಂಗ್ರಹಣೆ,ತೋಡುಗಳ ತಡೆ ನಿರ್ಮಾಣದ ವಿವಿಧ ಪ್ರಕಾರಗಳ ಅಧ್ಯಯನ, ಸುರಂಗ ವೀಕ್ಷಣೆ ಹಾಗೂ ನೀರಿನ ಮೂಲಗಳ ಅಧ್ಯಯನ, ನೀರು ಇಂಗಿಸುವಿಕೆಯ ಮಹತ್ವ, ಕೃಷಿಯಲ್ಲಿನ ಆಧುನಿಕ ನೀರಾವರಿ ವ್ಯವಸ್ಥೆ, ಭೂಮಿಯ ಮೇಲ್ಮೈ ನೀರಿನ ಅಸಮರ್ಪಕ ಬಳಕೆಯ ದುಷ್ಪಾರಿಣಾಮಗಳು ಮುಂತಾದ ವಿಷಯಗಳ ಬಗ್ಗೆ ಈ ಚಿತ್ರದಲ್ಲಿ ವಿದ್ಯಾರ್ಥಿಗಳಲ್ಲಿ, ಕೃಷಿಕರಲ್ಲಿ ಜನಜಾಗೃತಿ ಮೂಡಿಸುವ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುವುದು ಎಂದು ನಿರ್ದೇಶಕರು ವಿವರಿಸಿದರು. ಭೂಮಿತ್ರಾ ಸೇನಾ ಘಟಕದ ಸಂಚಾಲಕ ರಂಜಿತ್ ಕುಮಾರ್ ಬಿ.ಯಸ್ ಅವರು ನಿರ್ದೇಶಕರಿಗೆ ಸಾಥ್ ನೀಡುತ್ತಿದ್ದಾರೆ.

ಅಶೋಕ್ ಮೊಟ್ಟಕುಂಜ ಅವರು ಈ ಹಿಂದೆ ಪೆರಡಾಲ ನವಜೀವನ ಶಾಲೆಯಲ್ಲಿ ಸೇವ್ ವಾಟರ್ ಸೇವ್ ಲೈಫೆಂಬ ಕಿರುಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ವಿದ್ಯಾರ್ಥಿಗಳು ಅಭಿನಯಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಎಂಬಂತೆ ಆ ಕಿರುಚಿತ್ರದ ಛಾಯಾಗ್ರಹಣವನ್ನು ಬದಿಯಡ್ಕದ ಫಾಕ್ಸ್ ಸ್ಟಾರ್ ಸ್ಟುಡಿಯೋದ ಅಖಿಲೇಶ್ ನಗುಮುಗಂ ಅವರು ನಿರ್ವಹಿಸಿ, ವಿಷ್ಣುಪ್ರಕಾಶ್ ಮುಳ್ಳೇರಿಯ ಅವರ ಮಾರ್ಗದರ್ಶನದಲ್ಲಿ ಶಾಲಾ ವಠಾರದಲ್ಲೇ ಚಿತ್ರೀಕರಣ ಮಾಡಲಾಗಿತ್ತು. ನೀರಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವುದೇ ಆ ಚಿತ್ರದ ಉದ್ದೇಶವಾಗಿತ್ತು.

ಪ್ರಸ್ತುತ ತಂಡದಲ್ಲಿ ಭೂಮಿತ್ರಾ ಸೇನಾ ಕ್ಲಬ್ ಸದಸ್ಯರು ಹಾಗೂ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಕಿರು ಚಿತ್ರದ ಛಾಯಗ್ರಹಣವನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿಬಿನ್ ಮತ್ತು ಇನ್‌ಸೈಟ್ ಸ್ಟುಡಿಯೊ ಕಾಸರಗೋಡಿನ ರಾಜು.ಬಿ.ಕೆ ನಿರ್ವಹಿಸುತ್ತಿದ್ದಾರೆ. ಭೂಮಿತ್ರಾ ಸೇನಾ ಘಟಕದ ಮಾಜಿ ಸಂಚಾಲಕಾರದ ವಿಷ್ಣುಪ್ರಕಾಶ್ ಮುಳ್ಳೇರಿಯ ತಂಡಕ್ಕೆ ಸಹಕರಿಸುತ್ತಿದ್ದಾರೆ. ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯವರು ಚಿತ್ರೀಕರಣ ತಂಡಕ್ಕೆ ಶುಭ ಹಾರೈಸಿದ್ದಾರೆ.