ಪೆರ್ಲ : ಕೇರಳ ರಾಜ್ಯ ಯುವಜನ ಆಯೋಗ ಮತ್ತು ಎನ್.ಎಸ್.ಎಸ್ ನ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ದ ತಿಳುವಳಿಕಾ ತರಗತಿಯನ್ನು ನಾಲಂದ ಮಹಾವಿದ್ಯಾಲದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಬಕಾರಿ ನಿಗ್ರಹ ಅಧಿಕಾರಿ ಯನ್. ಜಿ. ರಘನಾಥನ್ ತರಗತಿ ನಡೆಸಿದರು. ಯುವಜನಾಂಗ ಮಾದಕ ವಸ್ತುಗಳ ದುಷ್ಪಾರಿಣಮಗಳ ಬಗ್ಗೆ ತಿಳಿದು ಜಾಗೃತರಾಗಬೇಕು ಹಾಗೂ ಮದ್ಯ, ಬೀಡಿ-ಸಿಗರೇಟು, ಪಾನ್ ಮಸಾಲ, ಗಾಂಜ, ಮುಂತಾದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.
ಕೇರಳ ರಾಜ್ಯ ಯುವಜನ ಆಯೋಗದ ಸದಸ್ಯ ಮಣಿಕಂಠ, ಪ್ರಸ್ತುತ ಯುವಜನತೆಯನ್ನು ಮಾದಕ ವಸ್ತುಗಳ ಬಳಕೆಯಿಂದ ವಿಮುಖಗೊಳಿಸುವತ್ತ ಕೇರಳ ರಾಜ್ಯ ಯುವಜನ ಆಯೋಗ ಕಾರ್ಯಕ್ರಮ ಸಂಘಟಿಸುತ್ತಿದೆ ಹಾಗೂ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಶಾಲಾ, ಕಾಲೇಜುಗಳನ್ನು ಕೇಂದ್ರೀಕರಿಸಿ ಮಾದಕ ವಸ್ತುಗಳ ವಿರುದ್ದ, , ಸೈಬರ್ ಅಪರಾಧ ಮುಂತಾದ ವಿಷಯಗಳಲ್ಲಿ ತಿಳುವಳಿಕಾ ತರಗತಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಭಾರ ಪ್ರಾಶುಪಾಲರಾದ ಅಶೋಕ್ ಮೊಟ್ಟಕುಂಜ ವಹಿಸಿದ್ದರು. ಪ್ರಸ್ತುತಜೀವನ ಮೌಲ್ಯ ಕುಸಿಯಲು ಸಾಮಾಜಿಕ ಜಾಲತಾಣಗಳು, ಅಮಲು ಪದಾರ್ಥಗಳು ಪ್ರಮುಖವಾಗಿ ಪ್ರಭಾವ ಬೀರುತ್ತದೆ. ಯುವಜನತೆಗೆ ಸಮರ್ಪಕ ಮಾರ್ಗದರ್ಶನ ದೊರಕಿಸುವ ನಿಟ್ಟಿನಲ್ಲಿ ತಿಳಯವಳಿಕಾ ತರಗತಿಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಎನ್.ಎಸ್.ಎಸ್ನ ಯೋಜನಾಧಿಕಾರಿ ಶಂಕರಖಂಡಿಗೆ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಲು ಹಾಗೂ ಏಕಾಗ್ರತೆ ಕಡಿಮೆಯಾಗಲು ಮದ್ಯ ವ್ಯಸನ, ತಾಂತ್ರಿಕತೆಯ ದುರುಪಯೋಗವು ಕಾರಣವಾಗುತ್ತದೆ. ಎನ್.ಎಸ್.ಎಸ್ನ ವಿದ್ಯಾರ್ಥಿಗಳು ಈ ಬಗೆಗೆ ಚಿಂತಿಸಿ ಸುದೃಢ ಸಮಾಜ ನಿರ್ಮಿಸಲು ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎನ್.ಎಸ್.ಎಸ್ನ ಕಾರ್ಯದರ್ಶಿ ವಿಕಾಸ್ ವಂದಿಸಿದರು.