ಪೆರ್ಲ ನಾಲಂದ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ಎನ್. ಎಸ್. ಎಸ್ ನ ಸಹಯೋಗದೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾರತೀಯ ಸೇನಾ ನಿವೃತ್ತ ಹವಾಲ್ದಾರ್ ಚಂದ್ರ ಕೆ. ಅವರು ದ್ವಜಾರೋಹಣಗೈದು ಪ್ರಜಾಪ್ರಭುತ್ವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವಿದ್ಯಾರ್ಥಿಗಳ ಪ್ರಾಥನೆಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭವಾಗಿ ಮುಖ್ಯ ಅತಿಥಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ತನ್ನ ಸೇನಾ ಜೀವನದ ಅನುಭವವಗಳನ್ನು ಹಂಚಿಕ್ಕೊಂಡರು ಹಾಗೂ ವಿದ್ಯಾರ್ಥಿಗಳು ತಮ್ಮನ್ನು ತಾವು ದೇಶ ಸೇವೆಗೆ ತೊಡಗಿಸಿಕ್ಕೊಳ್ಳಬೇಕು ಎಂದರು. ಶ್ರೀಯುತರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 1998 ರಲ್ಲಿ ನಿವೃತ್ತಿಗೊಂಡ ಬಳಿಕ ಸ್ವ-ಉದ್ಯೋಗದಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಆಡಳಿತಾಧಿಕಾರಿಯಾದ ಶಿವಕುಮಾರ್ ಸಂವಿಧಾನದ ರಚನೆ ಹಾಗು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯದರ್ಶಿಯಾದ ಕೇಶವಶರ್ಮ ಭಾರತವು ಶ್ರೀಮಂತ ರಾಷ್ಟ್ರವಾದರೂ ಬಹುಪಾಲು ಪ್ರಜೆಗಳು ಬಡವಾರಾಗಿದ್ದಾರೆ ಈ ನಿಟ್ಟಿನಲ್ಲಿ ನಾವೆಲ್ಲಾ ಯೋಚಿಸಿ ಪ್ರಸ್ತುತ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಅಶೋಕ ಮೊಟ್ಟಕುಂಜ ಅವರು ಭಾರತದ ಸಂವಿಧಾನವು ಜಗತ್ತಿನಲ್ಲೇ ಅತ್ಯಂತ ವಿಸ್ತೃತ ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಸಂರಕ್ಷಣೆಯನ್ನು ಕಾತರಿಗೊಳಿಸುತ್ತದೆ. ವಿದ್ಯಾರ್ಥಿಗಳು ಮೂಲಭೂತ ಕರ್ತವ್ಯಗಳ ಬಗ್ಗೆ ಜಾಗೃತರಾಗಿ ಸುಸ್ತಿರ ಬೆಳವನಿಗೆಗೆ ಶ್ರಮಿಸಬೇಕು ಎಂದು ಪ್ರಾಸ್ತಾವಿಕವಾಗಿ ನುಡಿದು ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು.
ಎನ್. ಎಸ್. ಎಸ್ ಯೋಜನಾಧಿಕಾರಿ ಶಂಖರ ಖಂಡಿಗೆ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಿಸುತ್ತಾ ಸೇನಾ ಯೋಧರ ನಿಸ್ವಾರ್ಥಸೇವೆಯಿಂದ ಭಾರತದಲ್ಲಿ ಭದ್ರತೆ ಹಾಗು ಶಾಂತಿ ನೆಲೆಸಿದೆ ಯೋಧರನ್ನು ಸ್ಮರಿಸುವುದು ಹಾಗು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಶಿಲ್ಪಾ ಶಿವರಾಮ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕರು ಹಾಗು ವಿದ್ಯಾರ್ಥಿಗಳು ಹೆಚ್ಚಿನ ಸಂಖೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.