ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಅಂದು ನಡೆದ ಸಭಾ ಕಾರ್ಯಕ್ರಮದಲ್ಲಿ ನಾಯಮ್ಮಾರಮೂಲೆ ಟಿ.ಐ.ಎಚ್.ಎಸ್ ಶಾಲೆಯ ಗಣಿತ ಅಧ್ಯಾಪಕ ಸತೀಶನ್ ಕೆ. ಯವರು ಮುಖ್ಯ ಅತಿಥಿಗಳಾಗಿದ್ದರು.
ಓಣಂ ನಾಡಹಬ್ಬ ಮಾತ್ರವಲ್ಲದೆ ಕೃಷಿಕರ ಉತ್ಸವವಾಗಿದೆ. ಸಮಾನತೆ ಮತ್ತು ಸಹೋದರತ್ವವನ್ನು ಉಳಿಸಿ ಬೆಳೆಸುವ ಹಬ್ಬವೇ ಓಣಂ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷರು ಅಧ್ಯಕ್ಷತೆ ವಹಿಸಿ ಓಣಂನ ವಿಶೇಷತೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯ ರಾಜಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಷ್ಣು ಪ್ರೀಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಲಯಾಳಂ ಉಪನ್ಯಾಸಕಿ ವಿನೀಶ ಎಸ್. ವಿ ಸ್ವಾಗತಿಸಿ, ಆಂಗ್ಲಬಾಷಾ ಉಪಾನ್ಯಾಸಕಿ ಉಷಾಶ್ರೀ ವಂದಿಸಿದರು. ವಿದ್ಯಾರ್ಥಿನಿ ಫಾತಿಮತ್ ಇಶಾನ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ವಿವಿಧ ಸ್ಪರ್ಧೆಗಳು ಮತ್ತು ಮನೋರಂಜನ ಕಾರ್ಯಕ್ರಮಗಳು ನಡೆದವು.