ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ್ರವರು ದಿನಾಂಕ 23-09-2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು.
ಉಪನ್ಯಾಸಕ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರು ಆದರೆ ಪ್ರತಿಭೆಯನ್ನು ಎಲ್ಲಿ, ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ಮಾರ್ಗದರ್ಶನದ ಕೊರತೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ವ್ಯಕ್ತಿಗತ ಜೀವನ ವಿಕಾಸಕ್ಕೆ ಅನುಕೂಲವಾಗುವ ರೀತಿಯ ವಿಷಯಗಳನ್ನು ತಿಳಿಸಿ ಅವರನ್ನು ಸರಿಯಾದ ದಾರಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ನಮ್ಮಲ್ಲಿದೆ. ಆದುದರಿಂದ ನಾವು ಬೆಳೆಯಬೇಕು ಅವರನ್ನು ಬೆಳೆಸಬೇಕು. ನಾವು ಸರಿಯಾದರೆ ಜಗತ್ತು ಸರಿಯಾಗುತ್ತದೆ. ಆ ಮೂಲಕ ಭಾರತ ಕೀರ್ತಿವಂತ ದೇಶವಾಗುವುದು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿ ಗೋಪಾಲ ಚೆಟ್ಟಿಯಾರ್ ಅತಿಥಿಗಳನ್ನು ಅಧ್ಯಾಪಕ ವೃಂದಕ್ಕೆ ಪರಿಚಯಿಸಿದರು. ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ ಸ್ವಾಗತಿಸಿದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಕೆ.ಕೇಶವ ಶರ್ಮ ವಂದಿಸಿದರು.