ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್.ಎಸ್.ಎಸ್ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಗತಿ ನಡೆಸಿಕೊಡಲಾಯಿತು. ಮುನ್ನಾಡ್ ಪೀಪಲ್ಸ್ ಕೋ-ಆಪರೇಟಿವ್ ಕಾಲೇಜಿನ ಮೇನೇಜೆಮೆಂಟ್ ವಿಭಾಗದ ಮುಖ್ಯಸ್ಥ ಶ್ರೀ ಪುಷ್ಪಾಕರ ಬೆಂಡಿಚ್ಚಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಮಾಜಸೇವೆ ಎಂಬುದು ಮನುಷ್ಯನ ಅಂತರಾಳದಿಂದ ಉದಿಸಿ ಬರಬೇಕೆ ಹೊರತು ಅದು ಒತ್ತಾಯದಿಂದ ಬರಬಾರದು. ಆಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಸಮಾಜ ಸೇವಕನಾಗುತ್ತಾನೆ. ಪಾಶ್ಚಾತ್ಯ ಪ್ರಭಾವದಿಂದ ಮಾನವನಲ್ಲಿ ಸ್ವಾರ್ಥ ಹೆಚ್ಚುತ್ತಿದೆ ಮಾತ್ರವಲ್ಲದೆ ವೃಷ್ಠಿ ಚಿಂತೆಯೇ ಹೊರತು ಸಮಷ್ಠಿಯ ಚಿಂತನೆ ಇಲ್ಲವಾಗುವ ಈ ಕಾಲಘಟ್ಟದಲ್ಲಿ ಜನರಲ್ಲಿ ಸೇವಾ ಮನೋಭಾವ ಮೂಡಿಸಲು ಎನ್.ಎಸ್.ಎಸ್ ನಂತಹದು ಕಾಲೇಜು ಜೀವನದಲ್ಲಿ ಅಗತ್ಯ ಎಂದು ಶ್ರೀ ಪುಷ್ಪಾಕರ ಪ್ರತಿಪಾದಿಸಿದರು. ಎನ್. ಎಸ್. ಎಸ್. ನಂತಹ ಘಟಕಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಂಡು ಎಲ್ಲರೂ ಮಾನವರಾಗಲು ಮುಂದಾಗಬೇಕು ಎಂದು ಅವರು ನುಡಿದರು.
ಜಿಯೋಗ್ರಫಿ ವಿಭಾಗದ ಮುಖ್ಯಸ್ಥ ಅಭಿಲಾಷ್ ಟಿ.ಕೆ ಅಧ್ಯಕ್ಷತೆ ವಹಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಕಾಸ್ ಸ್ವಾಗತಿಸಿ, ವಿದ್ಯಾರ್ಥಿನಿ ಭವಿಷ ವಂದಿಸಿದರು. ಸೆರೀನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ, ಉಪನ್ಯಾಸಕಿಯರು ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.