ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್ನ ವತಿಯಲ್ಲಿ ’ವಿಶ್ವ ಉರಗ ದಿನ’ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ರವರು ವಹಿಸಿದ್ದರು. ಕಲ್ಲನಾಗರ ಕಂಡರೆ ಹಾಲೆರೆಯೆಂಬರಯ್ಯ, ದಿಟದ ನಾಗರ ಕಂಡರೆ ಹೊಡೆಯೆಂಬರಯ್ಯ ಎಂಬ ವಚನದ ಸಾಲನ್ನು ಉಲ್ಲೇಖಿಸುತ್ತಾ, ಹಿಂದೂ ಸಂಸ್ಕ್ರತಿಯಲ್ಲಿ ನಾಗನಿಗೆ ದೇವರ ಸ್ಥಾನವಿದೆ ಎಂದರು.
ಭೂಮಿತ್ರ ಸೇನೆಯ ಸಂಚಾಲಕರಾದ ರಂಜಿತ್ ಕುಮಾರ್ರವರು ದಿನದ ಪ್ರತ್ಯೇಕತೆಯನ್ನು ವಿವರಿಸಿದರು. ಕಾಡು ನಾಶವಾದರೆ ಹಾವುಗಳೂ ನಾಶವಾದಂತೆ, ಹಾವನ್ನು ಕೊಲ್ಲದೆ ಬದುಕಲು ಬಿಡಬೇಕು ಪ್ರಕೃತಿಯಲ್ಲಿ ಮಾನವನಿಗಿರುವಷ್ಟೆ ಹಕ್ಕು ಅದಕ್ಕೂ ಇದೆ ಆದುದರಿಂದ ಹಾವುಗಳ ಸಂತತಿಯನ್ನು ಉಳಿಸಬೇಕು ಎಂದು ತಿಳಿಸಿದರು.
ಅನಂತರ ಸಂಘದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಿರಿಯ ವಿದ್ಯಾರ್ಥಿಯಾದ ಮ್ಯಾಕ್ಸಿಮ್ ರೋಡ್ರಿಗಸ್ರವರು ಹಾವುಗಳ ರಕ್ಷಣೆ, ಪ್ರತ್ಯೇಕತೆ ವಿವಿಧ ಹಾವುಗಳ ಬಗೆಗಿನ ಮಾಹಿತಿಯನ್ನು ವಿವರವಾಗಿ ನೀಡಿದರು. ನಿಶಾಂತ್ರವರು ಸ್ವಾಗತಿಸಿ,ಕುಮಾರಿ ಅನುಷಾ ವಂದಿಸಿದರು.