ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್ ಹಾಗೂ ಎನ್. ಎಸ್. ಎಸ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಯುತ ಅಶೋಕ ಮೊಟ್ಟಕುಂಜ ಅವರು ವಹಿಸಿ ’ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಜನಸಂಖ್ಯಾ ನಿಯಂತ್ರಣ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯ ದೃಷ್ಠಿಯಲ್ಲಿ ಮೌಲ್ಯಾಧಾರಿತ ಕೌಟುಂಬಿಕ ರಚನೆ ಅಗತ್ಯ’ ಎಂದು ನುಡಿದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀ ನಾರಾಯಣ ಶೆಟ್ಟಿಯವರು ಜನಸಂಖ್ಯೆಯ ಹೆಚ್ಚಳದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಭೂಮಿತ್ರ ಸೇನಾ ಕ್ಲಬ್ನ ಸಂಯೋಜಕರಾದ ರಂಜಿತ್ ಕುಮಾರ್ ಬಿ. ಎಸ್ ವಹಿಸಿದರು. ಉಪನ್ಯಾಸಕರಾದ ಅಭಿಲಾಷ್ ಟಿ. ಕೆ, ಉಷಾಶ್ರೀ ಬಿ. ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆ ಉಪಸ್ಥಿತರಿದ್ದರು. ಎನ್. ಎಸ್. ಎಸ್ ಮತ್ತು ಭೂಮಿತ್ರ ಸೇನೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು. ವಿಕಾಸ್ ಸ್ವಾಗತಿಸಿ, ಡೆಲ್ವಿನ್ ರವರು ವಂದಿಸಿದರು.