×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಕಾಲೇಜಿನಲ್ಲಿ ಉದ್ಯೋಗ ಮೇಳ

ನಾಲಂದ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ನ ಜಂಟಿ ಆಶ್ರಯದಲ್ಲಿ ಮೇ 4ರಂದು ಉದ್ಯೋಗ ಮೇಳ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಯಾಂಪ್ಕೊ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ಖಂಡಿಗೆ ಇವರು ಪ್ರತಿಯೊಬ್ಬನ ಬದುಕಲ್ಲೂ ಉದ್ಯೋಗ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಮಾತನಾಡಿ ಸಮಯಕ್ಕೆ ತಕ್ಕಂತೆ ಬದಲಾಗುವುದು ಸಹಜ ಗುಣ. ಅದೇ ರೀತಿ ಮನುಷ್ಯನು ಕೂಡ ಬದಲಾಗ ಬೇಕಾದುದು ಅನಿವಾರ್ಯ, ಈಗ ಎಲ್ಲ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಮಾಡುವ ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.ಕಾಲೇಜು ಪ್ರಾಂಶುಪಾಲರಾದ ಶಂಕರ ಖಂಡಿಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ಲೇಸ್ಮೆಂಟ್ ಸೆಲ್ ಆಫೀಸರ್ ಮನೋಜ್ ಕುಮಾರ್ ಪಿ ಸ್ವಾಗತಿಸಿ ಪ್ರಾಧ್ಯಾಪಕಿ ಶಿಲ್ಪ ವಂದಿಸಿದರು. ಪ್ರಾಧ್ಯಾಪಕಿ ನಿಶ್ಮಿತಾ ಕಾರ್ಯಕ್ರಮವನ್ನು ಸಂಯೋಜಿಸಿದರು. ಗೌರವಾನ್ವಿತ ಸಲಹೆಗಾರ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಾಲಂದ ಕಾಲೇಜು ಆಡಳಿತ ಮಂಡಳಿ ಖಜಾಂಜಿ ಶ್ರೀ ಶಶಿಭೂಷಣ ಶಾಸ್ತ್ರೀಹಾಗೂ ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಹಾಗೂ ಎಲ್ಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು ಸುಮಾರು 10ರಷ್ಟು ಕಂಪೆನಿಗಳು ಬಾಗವಹಿಸಿ200 ರಷ್ಟು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.