ಕಾಲೇಜಿನಲ್ಲಿ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀ ಶಂಕರ ಖಂಡಿಗೆ ಅವರು ವಹಿಸಿದರು. ನಾಲಂದ ಕಾಲೇಜಿನ ಆಡಳಿತಮಂಡಳಿಯ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಬೀಳ್ಕೊಡುಗೆ ಅಂದರೆ ಅವರನ್ನು ಈ ಕಾಲೇಜಿನಿಂದ ಬೌತ್ತಿಕವಾಗಿ ಹೊರಗೆ ಹೋಗುದಾಗಿರಬಹುದು ಆದರೆ ಅವರು ಮುಂದಿನ ದಾರಿಯ ಮೂಲಕ ಅವರನ್ನು ಅವರ ಗುರಿ ತಲುಪಲು ಸಹಕರಿಸುವುದು ಎಂದರು. ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಕೇಶವ ಶರ್ಮ ಕೆ ಹಾಗು ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀ ಶ್ರೀನಿಧಿ ಕೆ ಮಾತನಾಡಿದರು. ಎಲ್ಲಾ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿ ದನ್ಯಶ್ರೀ ಜೆ ಸ್ವಾಗತಿಸಿ ಕಾವ್ಯ ಪಿ ವಂದಿಸಿದರು.