ಪೆರ್ಲ ನಾಲಂದ ಕಾಲೇಜಿನಲ್ಲಿ ತಾರೀಕು 1-3-2024 ಶುಕ್ರವಾರ ‘ ಅವಿನ್ಯ 2ಕೆ 24 ಕಾಲೇಜು ಡೆ ‘ ನಡೆಯಿತು. ನಾಲಂ ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ.ಸಿ ಎ ಸುಧೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ತನಿಗೆ ಸಾಧ್ಯವಾದಷ್ಟು ಬಾಷೆಯನ್ನು ಅರಿತುಕೊಳ್ಳುವುದು ಒಳ್ಳೆಯದು. ಹಾಗೂ ಸಂಸ್ಕೃತ ಭಾಷೆ ಕಲಿಯುವುದು ಮಹತ್ವದ ಮೌಲ್ಯವನ್ನು ನೀಡುತ್ತದೆ. ವಿದ್ಯಾಬ್ಯಾಸ ಮಾತ್ರ ನಮ್ಮ ಭವಿಷ್ಯ ನಿರ್ಮಿಸುವುದಿಲ್ಲ. ಅದರೊಂದಿಗೆ ಇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲರ ಕೌಶಲ್ಯ ಒಂದೇ ಆಗಿರಬೇಕೆಂದು ಇಲ್ಲ. ಆದರೆ ಅವರದ್ದೇ ಆದ ಕೌಶಲ್ಯದಿಂದ ಅವರು ಮಹತ್ವದ ಸ್ಥಾನವನ್ನು ಪಡೆಯಬಹುದು. ಹಣ ಮಾಡುವುದು ಮಾತ್ರ ಮಹತ್ವದ ಕೆಲಸವಲ್ಲ, ಬದಲಾಗಿ ಅದರೊಂದಿಗೆ ನಮ್ಮ ಬೆಳವಣಿಗೆಯನ್ನು ನೋಡಬೇಕು. ಜೀವನ ಕೇವಲ ಅಂಕ ಗಳಿಸಲಿರಿವುದಲ್ಲ. ಸೋಲು ಗೆಲುವು ನಮ್ಮ ಜೀವನದ ಬಾಗ. ನಾವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು
.
ನಿಮ್ಮ ಸ್ಥಾನ ಬದಲಾಗಬಹುದು ಆದರೆ ನೀವು ನಿಮ್ಮ ಕೆಲಸವನ್ನು ಒಳ್ಳೆ ರೀತಿಯಲ್ಲಿ ಮಾಡಿ. ನಿಮ್ಮ ಭವಿಷ್ಯವನ್ನು ಇನ್ನೊಬ್ಬರು ನಿರ್ಧರಿಸಲು ಸಾಧ್ಯವಿಲ್ಲ. ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಬೇಕು ಎಂದರು.ಎಣ್ಮಕಜೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀಮತಿ ರಮ್ಲ ಇಬ್ರಾಹಿಂ ಅತಿಥಿ ಆಗಿ ಹಾಗೂ ಸಿನೆಮಾತೋಟಗ್ರಫರ್ ಶ್ರೀ ಮೋಹನ್ ಪಡ್ರೆ ಅವರು ಪ್ರದಾನ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ್ ಪಡ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಅವರದ್ದೇ ಆದ ಕೌಶಲ್ಯ ಹಾಗೂ ಪ್ರತಿಭೆಗಳು ಇವೆ. ಅಂತಹ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಮ ಹಾಗೂ ಇಂತಹ ಕಾಲೇಜು ಮಹತ್ವದ ಪಾತ್ರ ವಹಿಸುತ್ತದೆ ಎಂದರು. ನಂತರ ಮಾತನಾಡಿದ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಶ್ರೀ ಕೇಶವ ಶರ್ಮ ಅವರು ಎಲ್ಲರಿಗೂ ಅವರದ್ದೇ ಆದ ಕಲೆ ಕೌಶಲ್ಯ ಇದೆ ಆ ಪ್ರತಿಭೆಯೂ ಸಮಾಜದಲ್ಲಿ ಗುರುತಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆ . ನಂತರ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಡೋವ್ ಮೆಂಟ್ ಪ್ರೈಸ್ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಲಾಯಿತು.ಶ್ರೀ ಶಂಕರ ಖಂಡಿಗೆ ಅವರು ಸ್ವಾಗತಿಸಿ ಶ್ರೀ ಶ್ರೀನಿಧಿ ಕೆ ವಂದಿಸಿದರು. ಪ್ರಾಧ್ಯಾಪಕಿ ಕಾವ್ಯ ಚಂದ್ರನ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಆನಂತರ ಎ ಬೀ ಸಿ ಡಿ ಮ್ಯೂಸಿಕಲ್ ಕಾಸರಗೋಡು ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.