×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಊರಿಗೆ ನೆರಳಾದ ನಾಲಂದ ಎನ್. ಎಸ್. ಎಸ್ ಘಟಕ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್. ಎಸ್. ಎಸ್ ಘಟಕದ ಸಪ್ತದಿನ ಶಿಬಿರದ ಸಮಾರೋಪ ಮತ್ತು ಬಸ್ ತಂಗುದಾಣದ ಉದ್ಘಾಟನಾ ಸಮಾರಂಭವು ದಿನಾಂಕ ಇತ್ತೀಚೆಗೆ ಕಜಂಪಾಡಿಯಲ್ಲಿ ನಡೆಯಿತು.

IMG_1849

IMG_1866

ಎಣ್ಮಕಜೆ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್. ಭಟ್ ರವರು ಊರವರ ಸಹಾಯದೊಂದಿಗೆ ಎನ್. ಎಸ್. ಎಸ್. ವಿದ್ಯಾರ್ಥಿಗಳು ಕಜಂಪಾಡಿಯಲ್ಲಿ ನಿರ್ಮಿಸಿದ ತಂಗುದಾಣವನ್ನು ಉದ್ಘಾಟಿಸಿದರು. ಶಾಲೆಯಲ್ಲಿ ನಡೆದ ಶಿಬಿರದ ಸಮಾರೋಪ ಸಮಾರಂಭವನ್ನು ಶ್ರೀಮತಿ ಪುಷ್ಪ ಅಮೆಕ್ಕಳ ಅವರು ಉದ್ಘಾಟಿಸಿ ಇಂತಹ ಶಿಬಿರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜೀವನ ಮೌಲ್ಯಗಳನ್ನು ಜಾಗೃತಗೊಳಿಸಿದಂತಾಗುತ್ತದೆ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರರು ಅಧ್ಯಕ್ಷತೆಯನ್ನು ವಹಿಸಿ ಎನ್. ಎಸ್. ಎಸ್ ಶಿಬಿರವು ವಿದ್ಯಾರ್ಥಿಗಳಿಗೆ ಸ್ನೇಹಮಯವಾದ ಬದುಕು ಮತ್ತು ಸಂಘ ಶಕ್ತಿಯನ್ನು ಕೊಡುತ್ತದೆ. ವಿದ್ಯೆ ಎನ್ನುವುದು ಕೇವಲ ನಾಲ್ಕು ಗೋಡೆಯ ಒಳಗಿರುವುದು ಮಾತ್ರವಲ್ಲ ಅದಕ್ಕಿಂತ ಹೆಚ್ಚು ಹೊರಗಿನಿಂದ ಕಲಿಯಲಿದ್ದೇವೆ ಎಂಬುದನ್ನು ಇಂತಹ ಶಿಬಿರಗಳಿಂದ ತಿಳಿದುಕೊಳ್ಳಲು ಸಾಧ್ಯ ಎಂದರು.

ಡಾ| ಶ್ರೀಪತಿ ಕಜಂಪಾಡಿಯವರು ಮುಖ್ಯ ಅತಿಥಿಗಳಾಗಿ ’ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ ನಾಲಂದ ಕಾಲೇಜಿನ ಎನ್. ಎಸ್. ಎಸ್ ಘಟಕದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡದ್ದು ಬಹಳ ಸಂತೋಷವನ್ನು ತಂದು ಕೊಟ್ಟಿದೆ ಎಂದರು.

ಉಪನ್ಯಾಸಕ ಶ್ರೀ ವಿಷ್ಣು ಪ್ರಕಾಶ್ ಮುಳ್ಳೇರಿಯ ಅವರು ಸಪ್ತದಿನ ಶಿಬಿರದ ಅವಲೋಕನವನ್ನು ಮಾಡಿ ಮಕ್ಕಳ ಕೆಲಸವನ್ನು ಶ್ಲಾಘಿಸಿದರು. ಎಣ್ಮಕಜೆ ಪಂಚಾಯತ್ತಿನ ಸದಸ್ಯೆ ಶ್ರೀಮತಿ ಪುಷ್ಪ. ವಿ, ಬಸ್ಸು ತಂಗುದಾಣ ನಿರ್ಮಿಸಲು ಸ್ಥಳದಾನ ಮಾಡಿದ ಶ್ರೀಹರಿ ಭಟ್ಟ ಕಜಂಪಾಡಿ, ಎಣ್ಮಕಜೆ ಪಂಚಾಯತಿನ ಮಾಜಿ ಸದಸ್ಯ ಶ್ರೀ ರಮಾನಂದ ಎಡಮಲೆ, ಸ್ಟಾಫ್‌ಸೆಕ್ರೆಟರಿ ಶ್ರೀ ಅನೀಶ್ ಕುಮಾರ್, ಉಪನ್ಯಾಸಕಿ ಖದೀಜತ್ತುಲ್ ಬುಶ್ರ, ಉಪನ್ಯಾಸಕ ಶ್ರೀ ರಂಜಿತ್ ಕುಮಾರ್, ಎನ್. ಎಸ್. ಎಸ್. ಕಾರ್ಯದರ್ಶಿಗಳಾದ ಶ್ರೀ ಮಾಕ್ಸಿಂ ರಾಡ್ರಿಗಸ್, ಶ್ರೀ ಉಮ್ಮರ್ ಅಲಿ ಶಿಹಾಬ್ ಎಂ. ಎ. ಅವರು ಶುಭಹಾರೈಸಿದರು. ಶಿಬಿರಾಧಿಕಾರಿ ಶ್ರೀ ಶಂಕರ್ ಖಂಡಿಗೆ ಸ್ವಾಗತಿಸಿ, ಎನ್. ಎಸ್. ಎಸ್. ಕಾರ್ಯದರ್ಶಿ ಕುಮಾರಿ ಅರ್ಪಿತ ವಂದಿಸಿದರು. ಇಂಗ್ಲೀಷ್ ಉಪಾನ್ಯಾಸಕ ಶ್ರೀ ಸತೀಶ್ ಕಾರ್ಯಕ್ರಮ ನಿರೂಪಿಸಿದರು.