ಪ್ರಕೃತಿಯ ಅಮೂಲ್ಯ ಜೀವ ಸಂಪತ್ತಾದ ಹಕ್ಕಿಗಳ ದಾಹ ತಣಿಸಲು ನೀರಿನ ಪಾತ್ರೆ ಇರಿಸುವ ಮೂಲಕ ಎನ್ನೆಸ್ಸೆಸ್ ವಿದ್ಯಾರ್ಥಿಗಳು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಕಾಲೇಜು ಪರಿಸರದ ಮರದಲ್ಲಿ ಮಣ್ಣಿನ ಪಾತ್ರೆ ಹಾಗೂ ಗೆರಟೆಗಳಲ್ಲಿ ನೀರು ತುಂಬಿಸಿ ಮರಗಳಲ್ಲಿ ಕಟ್ಟಿ ವಿದ್ಯಾರ್ಥಿಗಳು ಹಕ್ಕಿಗಳ ಬಾಯಾರಿಕೆ ತಣಿಸುವ ವ್ಯವಸ್ಥೆ ಮಾಡಿದ್ದಾರೆ.
ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಶೇಣಿ, ಉದ್ಘಾಟಿಸಿ ಮಾತನಾಡಿ ಮಾನವನ ಸ್ವಾರ್ಥ ಹಾಗೂ ಅನಿಯಂತ್ರಿತ ಉಪಯೋಗದಿಂದ ಜೀವಾ ಮೃತ ಬರಿದಾಗುತ್ತಿದೆ.ಭೂಮಿಯ ನೀರು ಸಕಲ ಜೀವಜಾಲಕ್ಕೂ ಸಲ್ಲಬೇಕು ಜಲ ಸಂರಕ್ಷಣೆಯಿಂದ ಮಾತ್ರ ಸಕಲ ಜೀವ ಜಾಲಗಳ ರಕ್ಷಣೆ ಸಾಧ್ಯ.ಹಕ್ಕಿಗಳಿಗೂ ಒಂದು ಬಿಂದು ನೀರು ಎಂಬ ದ್ಯೇಯದೊಂದಿಗೆ ವಿದ್ಯಾರ್ಥಿಗಳು ನಡೆಸಿದ ವಿನೂತನ ಕಾರ್ಯಕ್ರಮ ಸಮಾಜಕ್ಕೆ ಸಂದೇಶ ನೀಡಲಿದೆ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಸಿಬ್ಬಂದಿ ಕಾರ್ಯದರ್ಶಿ ಶಂಕರ್ ಖಂಡಿಗೆ, ಎನ್ನೆಸ್ಸೆಸ್ ಕಾರ್ಯದರ್ಶಿ ನವೀನ್ ರಾಜ್, ಲಾವಣ್ಯ ಉಪಸ್ಥಿತರಿದ್ದರು.ಶರಣ್ಯ ಸ್ವಾಗತಿಸಿದರು.ಉಷಕುಮಾರಿ ವಂದಿಸಿದರು.