ಪೆರ್ಲ: ನಾಲಂದ ಮಹಾವಿದ್ಯಾಲಯದ ವತಿಯಿಂದ ಡಿಸೆಂಬರ್ ಒಂದರಂದು ಜಾಗತಿಕ ಏಡ್ಸ್ ದಿನಾಚರಣೆಯ ಅಂಗವಾಗಿ ಏಡ್ಸ್ ತಿಳುವಳಿಕಾ ರ್‍ಯಾಲಿ ನಡೆಯಿತು.
ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಭಾರತೀಯರು ಅನುಸರಿಸುವುದರಿಂದ ಈ ರೀತಿಯ ಮಾಹಾಮಾರಿ ನಮ್ಮ ದೇಶಕ್ಕೆ ಬಂದಿದೆ. ಇದರ ವಿರುದ್ಧ ಯುವಜನತೆ ಎಚ್ಚರವಹಿಸಬೇಕು ಎಂದು ಮಹಾವಿದ್ಯಾಲಯದ ಆಡಳಿತಾಧಿಕಾರಿ ಕೆ. ಶಿವಕುಮಾರ್ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ಟಾಫ್ ಕಾರ್ಯದರ್ಶಿ ಆನೀಶ್ ಕುಮಾರ್ ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ೨೦೦ ವರ್ಷಗಳ ಹಿಂದೆ ಆಫ್ರಿಕಾ ದೇಶದ ಮಂಗಗಳ ಮೂಲಕ ಮನುಷ್ಯರಿಗೆ ಹರಡಿದ ಈ ರೋಗ ಇಂದು ಕೋಟ್ಯಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ ಎಂದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಮಂಡಳಿಯ ಪರವಾಗಿ ರಾಜಶೇಖರ ಶಿರಂತಡ್ಕ, ಉಪನ್ಯಾಸಕರಾದ ಕೆ. ಕೇಶವ ಶರ್ಮ, ಅಭಿಲಾಷ್.ಟಿ.ಕೆ, ಜನಾರ್ದನ್, ವಿಷ್ಣುಪ್ರಕಾಶ್ ಮುಳ್ಳೇರಿಯಾ, ಸತೀಶ್ ಕೆ.ಕೆ ಪುರಮ್, ಮಾಲಿನಿ, ವಿಜಿನ, ರಂಜಿತ್ ಕುಮಾರ್, ಮಧುರವಾಣಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ಎಸ್.ಎಸ್ ಕಾರ್ಯದರ್ಶಿ ಕುಮಾರಿ ಅರ್ಪಿತಾ ಸ್ವಾಗತಿಸಿ, ಎನ್.ಎಸ್.ಎಸ್ ಕಾರ್ಯದರ್ಶಿ ಮಾಕ್ಸಿಮ್ ರೋಡ್ರಿಗಸ್ ವಂದಿಸಿದರು.