ಪೆರ್ಲ : ಪುಸ್ತಕ ಮನಸ್ಸಿಗಿರುವ ಔಷಧವಾಗಿದೆ. ಮಕ್ಕಳಲ್ಲಿ ವೈಚಾರಿಕತೆ ಬೆಳೆಯಬೇಕಾದರೆ ಓದು ಅತೀ ಮುಖ್ಯ, ಈ ಸಂಘ ಉತ್ತಮ ಸಾಹಿತಿಗಳನ್ನು ಬೆಳೆಸಲಿ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಮಲಯಾಳ ವಿಭಾಗದ ಮುಖ್ಯಸ್ಥರಾದ ಡಾ| ಸುಷ್ಮಕುಮಾರಿ ಹೇಳಿದರು. ಅವರು ಇಲ್ಲಿನ ನಾಲಂದ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾಹಿತ್ಯ ಸಂಘವನ್ನು ಉಧ್ಘಾಟಿಸಿ ಶುಭಹಾರೈಸಿದರು.
ಕುಮಾರವ್ಯಾಸ ಭಾರತದಂತಹಾ ಮಹಾಕಾವ್ಯಗಳಲ್ಲಿ ವ್ಯಕ್ತಿಬಂಧಗಳನ್ನು ಕವಿಯು ಅತ್ಯಂತ ಮನೋಹರವಾಗಿ ಮತ್ತು ದೀರ್ಘವಾಗಿ ಚಿತ್ರಿಸಿದ್ದಾನೆ. ಇದು ಒಂದು ಸಾಹಿತ್ಯಕ್ಕೆ ಮಾತ್ರ ಸಾಧ್ಯವಾಗುವಂತಹ ವಿಚಾರ. ಒಳ್ಳೆಯ ಸಾಹಿತ್ಯವು ನಮ್ಮ ಜೀವನದಲ್ಲಿ ಸಂತೋಷವನ್ನು,ಸುಖವನ್ನು ತಂದು ಕೊಡುತ್ತದೆ. ಮಾತುಗಾರರಿಗೆ ಮತ್ತು ಸಾಹಿತ್ಯಗಾರರಿಗೆ ಪತ್ರಿಕೋದ್ಯಮದಲ್ಲಿ ಅನೇಕ ಅವಕಾಶಗಳಿವೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಾಕೇಶ್‌ಕುಮಾರ್ ಕಮ್ಮಜೆ ಅವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|ಕೆ.ಕಮಲಾಕ್ಷ ಅವರು ಅಧ್ಯಕ್ಷ ಸ್ಥಾನವಹಿಸಿದ್ದರು. ಉಪನ್ಯಾಸಕರಾದ ಅನೀಶ್ ಕುಮಾರ್.ಪಿ.ಆರ್, ಸತೀಶ್.ಕೆ, ಮತ್ತು ಉಪನ್ಯಾಸಕಿ ಶೈಬಾ.ಕೆ ಶುಭಹಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಕೇಶವ ಶರ್ಮ ಸ್ವಾಗತಿಸಿ, ಮಲಯಾಳ ವಿಭಾಗದ ಉಪನ್ಯಾಸಕಿ ಜ್ಯೋತಿ.ಸಿ ವಂದಿಸಿದರು