ಭೂಮಿಯ ತಾಪಮಾನ ಇಂದು ಏರುಪೇರಾಗುತ್ತಿದೆ. ಪರಿಸರದ ಮೇಲೆ ನಮ್ಮ ನಿರಂತರ ಆಕ್ರಮಣ ನೆಲ, ಜಲ ಮತ್ತು ವಾಯುವನ್ನು ಕಲುಷಿತಗೊಳಿಸುತ್ತವೆ. ನಮ್ಮ ಆಧುನಿಕ ಬದುಕಿನ ರೀತಿ ರಿವಾಜುಗಳು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಭೂಮಂಡಲ ಇಂದು ಆನೇಕ ತೊಂದರೆಗಳನ್ನು ಅನುಭವಿಸುತ್ತಾ ಇದೆ. ನೀರಿಂಗಿಸುವಿಕೆ ಮತ್ತು ಜೈವಿಕ ಕೃಷಿ ವಿಧಾನದಿಂದ ತಕ್ಕಮಟ್ಟಿಗೆ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ಅಡ್ಯನಡ್ಕ ವಾರಣಾಶಿ ಸಂಶೋಧನಾ ಕೇಂದ್ರದ ಡಾ|ಅಶ್ವಿನಿ ಕೃಷ್ಣ ಮೂರ್ತಿ ಹೇಳಿದರು.
ಇವರು ವಾರಣಾಶಿ ಸಂಶೊಧನಾ ಕೇಂದ್ರ ಮತ್ತು ಜೈವಿಕ ಕೃಷಿ ತೋಟ ಸಂದರ್ಶಿಸಿದ ಪೆರ್ಲದ ನಾಲಂದ ಮಹಾವಿದ್ಯಾಲಯದ ಭೂಮಿತ್ರಸೇನಾ ಕ್ಲಬ್ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಅನೇಕ ಪ್ರಭೇದಗಳ ಕರಿಮೆಣಸು, ಹೂವುಗಳು, ಹಣ್ಣುಗಳು ಮತ್ತು ಇನ್ನಿತರ ಕಸಿ ಕಟ್ಟಿದ ಗಿಡಗಳ ಕುರಿತು ಮಾಹಿತಿಯನ್ನ ವಿದ್ಯಾರ್ಥಿಗಳಿಗೆ ನೀಡಿದರು. ಓರ್ಕಿಡ್ ಮತ್ತು ಇನ್ನಿತರ ಹೂಗಳ ಪ್ರಬೇಧಗಳು ವಿದೇಶಗಳಿಗೆ ರಫ್ತಾಗುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು. ಸಂಶೋಧನಾ ಕೇಂದ್ರದಲ್ಲಿ ಸಾಹಸಕ್ರೀಡೆಗೆ ವಿಫುಲ ಅವಕಾಶಗಳಿರುವುದನ್ನು ತಿಳಿಹೇಳಿದ ಅವರು ಒಂದೊಮ್ಮೆ ಆಸಕ್ತರು ಬರುವುದಿದ್ದರೆ ಇಲ್ಲಿ ಉಳಕ್ಕೊಳ್ಳಲು ವ್ಯವಸ್ಥೆ ಇದೆ ಎಂದರು.
ವಿದ್ಯಾರ್ಥಿಗಳು ಜೈವೀಕ ಕೃಷಿ ತೋಟ, ಕಸಿ ಕಟ್ಟುವ ವಿಧಾನದ ಕುರಿತು ಮತ್ತು ಇತರ ಮಾಹಿತಿಗಳನ್ನು ಸಂಗ್ರಹಿಸಿದರು. ನೀರಿಂಗಿಸುವ ದೊಡ್ಡ ಕೆರೆಗಳು, ತೆಂಗಿನ ಸಿಪ್ಪೆಯಿಂದ ತಯಾರಿಸಿದ ಗೊಬ್ಬರ, ವಿವಿಧ ಹೂಗಳು, ಕೊಕ್ಕೊ ಕೃಷಿ ಕುರಿತಾದ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.
ಭೂಮಿತ್ರಸೇನಾ ಕ್ಲಬ್ ಸಂಚಾಲಕರಾದ ವಿಷ್ಣುಪ್ರಕಾಶ್ ಮುಳ್ಳೇರಿಯ, ಕಾಲೇಜಿನ ಉಪನ್ಯಾಸಕಿಯರಾದ ವಿಜಿನಾ.ವಿ.ಪಿ ಮತ್ತು ಸಾಜಿದಾ.ಸಿ.ಎಚ್ ಇವರ ನೇತೃತ್ವದಲ್ಲಿ ಸಂದರ್ಶನ ನಡೆಯಿತು. ಕ್ಲಬ್ ವಿದ್ಯಾರ್ಥಿ ಕಾರ್ಯದರ್ಶಿ ಜಿತಿನ್, ಸಹಕರಿಸಿದರು. ೪೫ ಮಂದಿ ಕ್ಲಬ್ ಸದಸ್ಯರು ಭಾಗವಹಿಸಿ ಇದರ ಪ್ರಯೋಜನ ಪಡೆದರು.