ಪೆರ್ಲ : ರಾಷ್ಟ್ರೀಯ ದಿನಾಚರಣೆಗಳಲ್ಲಿ ಪರಿಸರ ಶುಚೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ’ಶುಚಿತ್ವ ಭಾರತ’ ಯೋಜನೆಗೆ ನಮ್ಮಿಂದಾಗುವ ಕೊಡುಗೆ ನೀಡಬೇಕು, ಇದರಿಂದ ನಮ್ಮ ಪರಿಸರವನ್ನು ಮಾಲಿನ್ಯಮುಕ್ತವಾಗಿರಿಸಬಹುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ನುಡಿದರು. ಗಾಂಧಿ ಜಯಂತಿಯ ಅಂಗವಾಗಿ ನಾಲಂದದ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಹಮ್ಮಿಕೊಂಡ ಪೆರ್ಲ ಪೇಟೆ ಮತ್ತು ಮಹಾವಿದ್ಯಾಲಯ ಪರಿಸರ ಶುಚೀಕರಣ ಕಾರ್ಯಕ್ರಮಕ್ಕೆ ಚಾಲನೆಕೊಟ್ಟು ಅವರು ಮಾತನಾಡಿದರು.
ಯೋಜನಾಧಿಕಾರಿ ಶಂಕರ್ ಖಂಡಿಗೆ, ಭೂಮಿತ್ರಸೇನಾ ಕ್ಲಬ್ ಸಂಚಾಲಕ ವಿಷ್ಣುಪ್ರಕಾಶ್ ಮುಳ್ಳೇರಿಯ, ಉಪನ್ಯಾಸಕರಾದ ರಂಜಿತ್ ರಾಜ್, ಕೇಶವ ಶರ್ಮ ಕೋರಿಕ್ಕಾರು, ರೇಖ, ವಿಜಿನಾ ಪಿ.ಪಿ, ರೆಜುಲಾ ರಾಜು, ಮಧುರವಾಣಿ, ಖದೀಜತ್ ಬುಶ್ರಾ ಮತ್ತು ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಟಿ. ಪ್ರಸಾದ್, ರಾಜಶೇಖರ, ಗಣೇಶ್ ಪೆರ್ಲ ಮುಂತಾದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ನೂರರಷ್ಟು ಸದಸ್ಯರು ಭಾಗವಹಿಸಿದರು.