ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಕಾಸರಗೋಡಿನ ನಬಾರ್ಡ್ ಪ್ರಾಯೋಜಿತ ಪ್ರಾಥಮಿಕ ಕೃಷಿ ಅಭಿವೃದ್ಧಿ ಘಟಕ ಜಂಟಿಯಾಗಿ ವಿಚಾರಗೋಷ್ಠಿ ಹಮ್ಮಿಕೊಂಡಿದ್ದವು.
ನಬಾರ್ಡ್ ಕೃಷಿ ಅಭಿವೃದ್ಧಿ ಘಟಕ ಕಾಸರಗೋಡು ಇದರ ಸಂಪನ್ಮೂಲ ವ್ಯಕ್ತಿಗಳಾದ ಅಡ್ವ: ಕೆ. ನಾರಾಯಣ ಮತ್ತು ಸೌಜಿತ್ ಆಂಟನಿ ಅವರು ಆಧುನಿಕ ಬ್ಯಾಂಕ್ ಸೇವೆಗಳು ಮತ್ತು ಕೃಷಿ ಸಾಲ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಹಿಂದಿನ ಕಾಲದಲ್ಲಿ ಒಂದು ಬೇಂಕ್ ಖಾತೆಯನ್ನು ತರೆಯುವುದೇ ಕಷ್ಟ ಸಾಧ್ಯವಾಗಿತ್ತು ಆದರೆ ಇಂದು ಮಾಹಿತಿ ತಂತ್ರಜ್ಞಾನದಿಂದ ಮನೆಯಿಂದಲೇ ಇದನ್ನು ತೆರೆಯಬಹುದು ಮಾತ್ರವಲ್ಲ ಹಣದ ವರ್ಗಾವಣೆ (ನೆಫ್ಟ್) ಯನ್ನೂ ನಡೆಸಬಹುದು ಎಂದು ಅಡ್ವ: ನಾರಾಯಣ ನುಡಿದರು. ಕೃಷಿಕರು ಯಾವೆಲ್ಲಾ ಸಾಲ ಸೌಲಭ್ಯಗಳನ್ನು ಪಡೆಯಬಹುದು ಎಂದು ಸೌಜಿತ್ ಆಂಟನಿ ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪ್ರಾಂಶುಪಾಲ ಡಾ| ಕೆ.ಕಮಲಾಕ್ಷ ಅವರು ವಹಿಸಿದ್ದರು. ಪೆರ್ಲ ಸೆವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಕಾಸರಗೋಡು ಜಿಲ್ಲಾ ಸಹಕಾರಿ ಬೇಂಕ್‌ನ ನಿರ್ದೇಶಕ ಎನ್. ಕೃಷ್ಣಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪೆರ್ಲ ಸೇವಾ ಸಹಕಾರಿ ಬೇಂಕ್‌ನ ಕಾರ್ಯದರ್ಶಿ ಕೆ. ಶಂಕರನಾರಾಯಣ ಭಟ್ ಮತ್ತು ಕಾಲೇಜಿನ ಆಡಳಿತ ಅಧಿಕಾರಿಯಾದ ಶಿವಕುಮಾರ್.ಕೆ ಅವರು ಶುಭಾಶಂಸನೆಗೈದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ರೈ, ಮೊಟ್ಟಕುಂಜ ಅವರು ಸ್ವಾಗತಿಸಿ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ಸಫಾ ವಂದಿಸಿದರು. ವಿಭಾಗದ ಉಪನ್ಯಾಸಕರಾದ ವಿಷ್ಣುಪ್ರಕಾಶ ಮುಳ್ಳೇರಿಯ ಮತ್ತು ಶಂಕರ ಖಂಡಿಗೆ ಕಾರ್ಯಕ್ರಮ ನಿರೂಪಿಸಿದರು.