ಪೆರ್ಲ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾಪ್ರಮುಖರಾದ ಶ್ರೀ ಮಂಗೇಶ್ ಭೇಂಡೆ ಪೆರ್ಲದ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಪುತ್ತೂರಿನ ವಿವೇಕಾನಂದ ವಿಧ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ನಾಲಂದ ಕಾಲೇಜಿನ ವ್ಯವಸ್ಥೆ ಮತ್ತು ಮುಂದಿನ ಯೋಜನೆಗಳ ಬಗೆಗೆ ತಿಳಿದುಕೊಂಡ ಅವರು ಸಂಸ್ಥೆ ಸರ್ವತೋಮುಖ ಅಭಿವೃದ್ದಿಯಾಗಲಿ ಎಂದು ಹಾರೈಸಿದರು.
ಹಿಂದುಸೇವಾ ಪ್ರತಿಷ್ಠಾನದ ಶ್ರೀ ಸುರೇಶ್ ಮತ್ತು ಶ್ರೀ ಶ್ರೀಧರ್ ಸಾಗರ ಅವರು ಮಂಗೇಶ್ ಭೇಂಡೆ ಜೊತೆಗಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕಮಲಾಕ್ಷ, ಆಡಳಿತಾಧಿಕಾರಿ ಶ್ರೀ ಶಿವಕುಮಾರ, ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ, ಕೋಶಾಧಿಕಾರಿ ಶ್ರೀ ಗೋಪಾಲ ಚೆಟ್ಟಿಯಾರ್, ಸದಸ್ಯರಾದ ಶ್ರೀ ರಾಜಶೇಖರ, ಶಂ.ನಾ.ಖಂಡಿಗೆ, ಶ್ರೀ ಶಶಿಭೂಷಣ ಶಾಸ್ತ್ರಿ, ಶ್ರೀ ಟಿ. ಪ್ರಸಾದ್ ಶ್ರೀ ಸುಮಿತ್‌ರಾಜ್ ಹಾಗು ಶ್ರೀ ಗಣೇಶ್ ಶೆಟ್ಟಿ ಹಾಜರಿದ್ದರು.