×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಗ್ರಂಥಾಲಯದ ನೂತನ ಪರಾಮರ್ಶನ ವಿಭಾಗ ಉದ್ಘಾಟನೆ

ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು ಅದನ್ನು ಸಾಧ್ಯವಿದ್ದಷ್ಟು ಗಳಿಸಬೇಕು ಮತ್ತು ಬಳಸಬೇಕು ಎಂದು ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ, ನಾಲಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಕೆ.ವಿ ಪ್ರಭಾವತಿಯವರು ತಿಳಿಸಿದರು. ಅವರು ಪೆರ್ಲ ನಾಲಂದ ಕಾಲೇಜಿನ ಗ್ರಂಥಾಲಯದ ನೂತನ ಪರಾಮರ್ಶನ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತ ಇಂದಿನ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಹೊಸ ಸಂಶೋಧನಾ ಪ್ರಕ್ರಿಯೆಗಳು ನಡೆಸಬೇಕಾದರೆ ಕಾಲೇಜುಗಳಲ್ಲಿ ಪರಾಮರ್ಶನ ವಿಭಾಗ ಅತೀ ಅಗತ್ಯ ಎಂದರು.

Kannada

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಯಾಂಪ್ಕೋ ನಿರ್ದೇಶಕರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಆದ ಸತೀಶ್ಚಂದ್ರ ಭಂಡಾರಿಯವರು ಮಾತನಾಡುತ್ತ ನಮ್ಮ ಕಾಲದಲ್ಲಿ ಕೃಷಿಗೆ ಪ್ರಧಾನ ಸ್ಥಾನ ಕಲಿಕೆಗೆ ಎರಡನೇ ಸ್ಥಾನವಿತ್ತು ಆದರೆ ಇಂದು ಕಲಿಕೆಗೆ ಪ್ರಧಾನ ಸ್ಥಾನ ದೊರಕಿದೆ ಮಾತ್ರವಲ್ಲದೆ ಪ್ರತಿಯೊಬ್ಬನೂ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ನೌಕರಿಯನ್ನು ಪಡೆಯಬೇಕೆಂಬುದು ಇಂದಿನ ಹೆತ್ತವರ ಅಭಿಲಾಷೆ. ಆದುದರಿಂದ ಇಂದು ಸಾಕಷ್ಟು ಪ್ರೋತ್ಸಾಹ ಮನೆಯಿಂದ ದೊರಕುತ್ತದೆ. ಹಾಗಾಗಿ ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ವಿಪುಲವಾದ ಪರಾಮರ್ಶನ ಗ್ರಂಥಗಳು ಮತ್ತು ಅದಕ್ಕೆ ಪ್ರತ್ಯೇಕ ವಿಭಾಗ ಅತೀ ಅಗತ್ಯ. ಅಂತಹ ಮಹತ್ಕಾರ್ಯವನ್ನು ಪೆರ್ಲ ನಾಲಂದ ಕಾಲೇಜು ಮಾಡಿರುವುದು ಶ್ಲಾಘನೀಯ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಲೇಜುಗಳಲ್ಲಿ ಪರಾಮರ್ಶನ ವಿಭಾಗದ ಅಗತ್ಯತೆಯನ್ನು ತಿಳಿಸಿಕೊಟ್ಟರು. ಉಪನ್ಯಾಸಕ ಶ್ರೀನಿಧಿ ಸ್ವಾಗತಿಸಿ, ಗೀತಾ ವಿ ಭಟ್ ವಂದಿಸಿದರು. ಶಿಲ್ಪ.ಪಿ ಕಾರ್ಯಕ್ರಮ ನಿರೂಪಿಸಿದರು.