×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಉದ್ಯೋಗಾರ್ಥಿಗಳ ನೇಮಕಾತಿ ಪ್ರಕ್ರಿಯೆ

ಮಾನವನಿಗೆ ಉದ್ಯೋಗ ಅತೀ ಅಗತ್ಯ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಸಿಕ್ಕಿದ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಂಡು ನಮ್ಮ ಬದುಕನ್ನು ಸಾರ್ಥಕಗೊಳಿಸುವುದರ ಜೊತೆಗೆ ದೇಶ ಅಭಿವೃದ್ಧಿಗೊಳ್ಳಬೇಕು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್‌ನ ವತಿಯಲ್ಲಿ ನಡೆದ ಉದ್ಯೋಗಾರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಪಿ. ರಾಜಾರಾಮ ಬಾಳಿಗರು ಉದ್ಘಾಟಿಸಿ ನುಡಿದರು.

DSC00201

DSC00187

ನಾವು ಪದವಿ ಮುಗಿಸಿದ ಸಂದರ್ಭದಲ್ಲಿ ವೃತ್ತಿಯನ್ನು ಅರಸುತ್ತ ನಗರಗಳಲ್ಲಿ ಅಲೆಯಬೇಕಾಗಿತ್ತು. ಆದರೆ ಇಂದಿನ ಆದುನಿಕ ಯುಗದಲ್ಲಿ ಉದ್ಯಮಗಳು ಉದ್ಯೋಗಾರ್ಥಿಗಳನ್ನು ಹುಡುಕಿಕೊಂಡು ಬರುತ್ತಿವೆ. ಇದು ನಿಮ್ಮೆಲ್ಲರ ಭಾಗ್ಯ. ನಾಲಂದ ಕಾಲೇಜಿನಲ್ಲಿ ಇಂತಹಾ ಪ್ರಯತ್ನ ಪ್ರಥಮವಾಗಿ ನಡೆಯುತ್ತಿರುವುದು. ನಿಮ್ಮ ಕೌಶಲ್ಯಗಳನ್ನು ಪೂರ್ಣವಾಗಿ ಪ್ರದರ್ಶಿಸಿ ಹೆಚ್ಚಿನವರು ಉದ್ಯೋಗವನ್ನು ಪಡೆದು ಉಜ್ವಲ ಭವಿಷ್ಯವನ್ನು ಕಾಣುವಂತಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಶುಭಹಾರೈಸಿದರು. ಕಾಲೇಜಿನ ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಕುಮಾರ್‌ರವರು ಶುಭಹಾರೈಸಿದರು. ಅಶ್ವಂತ್ ಎಚ್.ಆರ್ ಎಕ್ಸಿಕ್ಯೂಟಿವ್ ಅವರು ಐ.ಸಿ.ಐ.ಸಿ.ಐ ಬ್ಯಾಂಕ್‌ಗಾಗಿ ಟಿ.ವಿ.ಎಸ್ ಟ್ರೈನಿಂಗ್ ಎಂಡ್ ಸರ್ವೀಸಸ್‌ನ ಆಯ್ಕೆಗಾರರಾಗಿ ಬಂದು ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ ಒಂಬತ್ತು ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಉಪನ್ಯಾಸಕ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀನಿಧಿ ವಂದಿಸಿದರು, ಕಿಶನ್ ಪಿ. ಕಾರ್ಯಕ್ರಮ ನಿರ್ವಹಿಸಿದರು.