ಕಣ್ಣೂರು ವಿಶ್ವವಿದ್ಯಾನಿಲಯದ 2017-18 ರ ಕಲೋತ್ಸವವು ಎಸ್.ಎನ್ ಕಾಲೇಜ್ ತೋಟಡದಲ್ಲಿ ನಡೆಯಿತು. ಯಕ್ಷಗಾನ ಸ್ಪರ್ಧೆಯಲ್ಲಿ ’ಸುದರ್ಶನ ವಿಜಯ’ ಎಂಬ ಕಥಾ ಪ್ರಸಂಗವನ್ನು ಪ್ರದರ್ಶಿಸಿ ಪೆರ್ಲ ನಾಲಂದ ಮಹಾವಿದ್ಯಾಲಯವು ’ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಸಾಗರ್, ನಿರಂಜನ್ ಬಳ್ಳುಳ್ಳಾಯ, ವಿಕಾಸ್, ಅಭಿಲಾಷ್, ಅರ್ಪಿತ್, ಅಕ್ಷತಾ, ಪ್ರಜ್ಞಾ, ನಿಶಾ, ಶರ್ಮಿತಾ ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಉಪನ್ಯಾಸಕ, ಉಪನ್ಯಾಸಕಿಯರು ಅಭಿನಂದಿಸಿದರು. ಯಕ್ಷಗಾನ ತಂಡದ ತರಬೇತುದಾರರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸಹಕರಿಸಿದರು. ಉಪನ್ಯಾಸಕ ಶಂಕರ ಖಂಡಿಗೆಯವರು ಯಕ್ಷಗಾನದ ಜವಾಬ್ದಾರಿ ವಹಿಸಿಕೊಂಡಿದ್ದರು.