ಪ್ಲಾಸ್ಟಿಕ್‌ನ ಉಪಯೋಗದಿಂದ ಪರಿಸರನಾಶವಾಗುವುದರೊಂದಿಗೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಈಶ್ವರ ಶರ್ಮ ನಲ್ಕರವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳು ಎಂಬ ವಿಷಯz’ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಪ್ಲಾಸ್ಟಿಕ್ ನಿರೋಧಿಸಿದರೆ ಮಾತ್ರ ಪರಿಣಾಮಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತಾಪಮಾನದ ಏರುವಿಕೆ ಮತ್ತು ಪ್ರಾಕೃತಿಕ ವೈಪರೀತ್ಯಗಳಿಗೆ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯೇ ಕಾರಣ ಎಂದರು.
ಡಾ| ಶ್ರೀರಾಮ ಭಟ್ ನಲ್ಕರವರು ಅಧ್ಯಕ್ಷತೆಯನ್ನು ವಹಿಸಿ ವೈಜ್ಞಾನಿಕ ಸಂಶೋಧನೆಯ ಪರಿಣಾಮವಾಗಿ ಎಷ್ಟು ಪ್ರಗತಿ ಕಂಡಿದೆಯೋ ಅಷ್ಟೇ ದುಷ್ಪರಿಣಾಮಗಳಾಗಿವೆ ಎಂದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶಂಕರ ಖಂಡಿಗೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷಿಕ ಗಣಪತಿ ಭಟ್ ನಲ್ಕರವರು ಉಪಸ್ಥಿತರಿದ್ದರು. ಉಪನ್ಯಾಸಕ ಕಿಶನ್. ಪಿ. ಉಪನ್ಯಾಸಕಿ ಶ್ರುತಿ, ಕಾಲೇಜು ಸಿಬ್ಬಂದಿಗಳಾದ ರಾಧಾಕೃಷ್ಣ ವೈ. ಎಸ್, ಜಯಂತಿ ಸಭೆಯಲ್ಲಿ ಭಾಗವಹಿಸಿದರು. ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ಪ್ರದೀಪ್, ನಯನ ಮೊದಲಾದವರು ಹಾಜರಿದ್ದರು.