ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಬ್ಲಡ್ ಬ್ಯಾಂಕ್ನ ಸಹಯೋಗದೊಂದಿಗೆ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಕಾಲೇಜ್ ಯೂನಿಯನ್ ರಕ್ತದಾನ ಶಿಬಿರದ ಮೂಲಕ ಎನ್.ಎಸ್.ಎಸ್ ದಿನಾಚರಣೆಯನ್ನು ಆಚರಿಸಿತು. ಕಾಲೇಜು ಪ್ರಾಂಶುಪಾಲ ಪ್ರೊ| ಪಿ. ಶಂಕರನಾರಾಯಣ ಹೊಳ್ಳರು ಉದ್ಘಾಟಿಸಿ ಮಾನವನು ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಂಡು ರಕ್ತದಾನ ಮಾಡಿ ಇತರರಿಗೆ ಜೀವತುಂಬುವ ಮಹತ್ಕಾರ್ಯವನ್ನು ಬದುಕಿನಲ್ಲಿ ಮಾಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಡಾ| ಷರೀನಾರವರು ವಿದ್ಯಾರ್ಥಿಗಳಿಗೆ ರಕ್ತದ ಮಹತ್ವವನ್ನು ತಿಳಿಸಿಕೊಟ್ಟರು. ರಕ್ತದಾನ ಶಿಬಿರದಲ್ಲಿ ಸರಕಾರಿ ಆರೋಗ್ಯ ಕೇಂದ್ರದ ಬ್ಲಡ್ ಬ್ಯಾಂಕಿನ ಟೆಕ್ನೀಷಿಯನ್ ದೀಪಕ್, ಕೌನ್ಸಿಲರ್ ಅನ್ನಪೂರ್ಣೇಶ್ವರಿ, ಅಭಿಲಾಷ್, ಮೇರಿ ಮೊದಲಾದವರು ಸಹಕರಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆಯವರು ಉಪಸ್ಥಿತರಿದ್ದರು. ಉಪನ್ಯಾಸಕ, ಉಪನ್ಯಾಸಕಿಯರು ವಿದ್ಯಾರ್ಥಿ-ವಿದಾರ್ಥಿನಿಯರು 50 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡರು.