ಪೆರ್ಲ ನಾಲಂದಾ ಮಹಾವಿದ್ಯಾಲಯದ ಎನ್. ಎಸ್. ಎಸ್ ಘಟಕದ ವತಿಯಲ್ಲಿ ’ಶುಚಿತ್ವ ಪಖ್ವಾಡಾ’ ಕಾರ್ಯಕ್ರಮದ ಅಂಗವಾಗಿ ಎಣ್ಮಕಜೆ ಪಂಜಾಯತಿನ ನಲ್ಕ ಪ್ರದೇದ ಮನೆಯವರಿಗೆ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಮನೆ ಮನೆ ಅಭಿಯಾನಕ್ಕೆ ಎಣ್ಮಕಜೆ ಪಂಚಾಯತ್ತಿನ ಅಡ್ಕಸ್ಥಳ ವಾರ್ಡಿನ ಸದಸ್ಯ ಸತೀಶ್ ಕುಲಾಲ್ ನಲ್ಕರವರು ಚಾಲನೆಯನ್ನು ನೀಡಿದರು.
ನಮ್ಮ ಪರಿಸರವನ್ನು ನಾವು ರಕ್ಷಿಸಿದರೆ ನಮಗೂ, ದೇಶಕ್ಕೂ ಒಳಿತು. ಪರಿಸರ ಕಲುಷಿತವಾದರೆ ನಾನಾ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದರು. ಹಮೀದ್ ನಲ್ಕರವರು ಅಭಿಯಾನಕ್ಕೆ ಶುಭವನ್ನು ಹಾರೈಸಿದರು. ನಲ್ಕ ಪರಿಸರದ ಸಂಕಪ್ಪ ಕುಲಾಲ್, ಈಶ್ವರ ಕುಲಾಲ್, ಮನೋಜ್, ರಮೇಶ್, ಜಗದೀಶ್ ಮೊದಲಾದವರು ಆಭಿಯಾನದ ಮುಂದಾಳತ್ವವನ್ನು ವಹಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ, ಉಪನ್ಯಾಸಕ ಶಂಕರ ಖಂಡಿಗೆಯವರು ಸ್ವಾಗತಿಸಿ. ವಿದ್ಯಾರ್ಥಿ ವಿತೇಶ್ ವಂದಿಸಿದರು ವಿಕಾಸ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ಪ್ರದೀಪ್, ನಯನ, ಅರ್ಪಿತಾ ಮೊದಲಾದವರು ಆಭಿಯಾನದ ನೇತೃತ್ವ ವಹಿಸಿದರು ಎಂಭತ್ತಕ್ಕೂ ಮಿಕ್ಕಿದ ಎನ್.ಎಸ್.ಎಸ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.