ಪೆರ್ಲ : “ವಿವೇಕಾನಂದರು ಭಾರತೀಯ ಸಂಸ್ಕಾರವನ್ನುಜಗತ್ತಿಗೆ ತಿಳಿಸಿ ಅತೀ ಸಣ್ಣ ವಯಸ್ಸಿನಲ್ಲೇ ಖ್ಯಾತಿ ಪಡೆದವರು. ಯುವಜನಾಂಗಕ್ಕೆ ಆದರ್ಶರಾದವರೂ ಆಗಿದ್ದಾರೆ” ಎಂದು ಕರುಣಾಕರ ಮಾಸ್ತರ್ ಹೇಳಿದರು. ಅವರು ನಾಲಂದ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಆಡಳಿತ ಮಂಡಳಿ ಜಂಟಿಯಾಗಿ ಸಂಘಟಿಸಿದ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ವಿವೇಕಾನಂದರ ಜೀವನಚರಿತ್ರೆಯನ್ನು ಹಲವಾರು ವಿಚಾರಗಳ ಮೂಲಕ ವಿದ್ಯಾರ್ಥಿಗಳ ಮುಂದಿಟ್ಟ ಅವರು ಯುವಜನರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಭಾರತೀಯ ಸಂಸ್ಕಾರವನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಅರ್ಥಪೂರ್ಣವಾದುದು ಮಾತ್ರವಲ್ಲ ವಿದ್ಯಾರ್ಥಿಗಳು ವಿವೇಕಾನಂದರ ಮಾತಿನಂತೆ ಸಮಾಜವನ್ನುಕಟ್ಟಬೇಕುಎಂದು ನುಡಿದರು.
ಕಾಲೇಜಿನ ಆಡಳಿತ ಅಧಿಕಾರಿಯಾದ ಶಿವಕುಮಾರ್.ಕೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳು ವಿದ್ಯಾಲಯಗಳನ್ನು ವಿದ್ಯಾರ್ಜನೆಗೋಸ್ಕರ ಮಾತ್ರ ಬಳಸಬೇಕು ಜೊತೆಗೆ ವಿವೇಕಾನಂದರ ಆದರ್ಶಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಭಾರ ಪ್ರಾಶುಪಾಲರಾದ ಅಶೋಕ್ಮೊಟ್ಟಕುಂಜ ವಹಿಸಿದ್ದರು. ಇವರು ವಿವೇಕಾನಂದರ ಆದರ್ಶಜೀವನ ಚರಿತ್ರೆಯುವಿದ್ಯಾರ್ಥಿಗಳ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆಯಾಗಬಲ್ಲುದು ಎಂದರು. ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಅವರು ಮನುಷ್ಯನು ತನ್ನ ಸಂಸ್ಕಾರದಿಂದ ಮೃಗಗಳಿಂದ ವ್ಯತ್ಯಸ್ಥನಾದವನು ಮತ್ತು ತನ್ನ ಚಿಂತನಾಶೀಲತೆ ಹಾಗು ಕ್ರೀಯಾತ್ಮಕತೆಯಿಂದ ಬುದ್ಧಿಜಿವಿಯಾದನು. ವಿವೇಕಾನಂದರ ಬದುಕು ಯುವಜನತೆಗೆ ಸ್ಫೂರ್ತಿದಾಯಕವಾಗಲಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಭಾಕಾರ್ಯಕ್ರಮದ ನಂತರ ವಿವೇಕಾನಂದರ ಸಂದೇಶಗಳ ವಿಚಾರಗೋಷ್ಠಿಯನ್ನು ಸ್ಲೈಡ್ ಶೋ ಮೂಲಕ ವಿಷ್ಣುಪ್ರಕಾಶ್ ಮುಳ್ಳೇರಿಯ ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವೇಕಾನಂದರಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು.
ಸಭೆಯಲ್ಲಿಕಾಲೇಜಿನ ಆಡಳಿತ ಮಂಡಳಿಯ ಸದಸ್ಯಶ್ರೀ ರಾಜಶೇಖರ, ಎನ್.ಎಸ್.ಎಸ್. ನಯೋಜನಾಧಿಕಾರಿ ಶಂಕರಖಂಡಿಗೆ, ಉಪಸ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎನ್.ಎಸ್.ಎಸ್ನ ಯೋಜನಾಧಿಕಾರಿ ಶಂಕರಖಂಡಿಗೆ ವಂದಿಸಿದರು. ಉಪನ್ಯಾಸಕರಾದ ಕೇಶವಶರ್ಮ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು.