×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಬೇಂಗಪದವು-ಬಾಂಕನ-ಸೇರಾಜೆ-ದಾಸ್ರೋಕು ರಸ್ತೆ ನಿರ್ಮಾಣ

ಪೆರ್ಲ : ನಾಲಂದ ಕಾಲೇಜಿನ ಎನ್.ಎಸ್.ಎಸ್ ಘಟಕದ ಸದಸ್ಯರು ಈ ವರ್ಷದ ಶಿಬಿರದಲ್ಲಿ ಬೇಂಗಪದವು-ಬಾಂಕನ-ಸೇರಾಜೆ-ದಾಸ್ರೋಕು ರಸ್ತೆ ನಿರ್ಮಾಣ ಮಾಡಿದರು. ಸಪ್ತದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ಶ್ರಮದಿಂದ, ಕುಟುಂಬಶ್ರೀಯ ಸದಸ್ಯರು, ಪ್ರದೇಶದ ಜನರ ಮತ್ತು ಯಂತ್ರದ ಸಹಾಯದಿಂದ ಸ್ಥಳೀಯ ನಿವಾಸಿಗಳ ಹಲವಾರು ವರುಷಗಳ ಬೇಡಿಕೆಯನ್ನು ಪೂರೈಸಿದರು.

ಸುಮಾರು ಎರಡು ಕಿ.ಮೀ ಗಳಷ್ಟಿರುವ ಈ ರಸ್ತೆಯ ನಿರ್ಮಾಣ ಪ್ರದೇಶದ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ ಮತ್ತು ಕುರುಚಲು ಪೊದೆಗಳನ್ನು ಕಡಿದು ರಸ್ತೆಯ ಪ್ರಥಮ ನಿರ್ಮಾಣ ವೃತ್ತಿಯನ್ನು ಎನ್.ಎಸ್.ಎಸ್ ಘಟಕದ ಸದಸ್ಯರು ಮಾಡಿದರು. ಎಣ್ಮಕಜೆ ಗ್ರಾಮ ಪಂಚಾಯತ್ತಿನ ಸದಸ್ಯರಾದ ಉದಯ ಚೆಟ್ಟಿಯಾರ್ ಇವರ ಪರಿಶ್ರಮದಲ್ಲಿ ಈ ರಸ್ತೆ ನಿರ್ಮಿಸುವ ಮೂಲಕ ಜನರ ಹಲವು ವರ್ಷಗಳ ಆಶಯ ನೆರವೇರಿಸ್ಪಟ್ಟಿತು.

nalanda-road

nalanda-road1

ಬೇಂಗಪದವು-ಬಾಂಕನ-ಸೇರಾಜೆ-ದಾಸ್ರೋಕು ರಸ್ತೆಯ ಉದ್ಘಾಟನೆಯನ್ನು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾದ ರಾಧಾಕೃಷ್ಣ ಅಡ್ಯಂತಾಯ ಅವರು ನೇರವೇರಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪಾವಾಣಿ ಆರ್. ಭಟ್, ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯ ಸತೀಶ್ ಕುಲಾಲ್ ನಲ್ಕ, ನಾಲಂದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿಯಾದ ಶಿವಕುಮಾರ್ ಕೆ, ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶಿವಕುಮಾರ್ ಎಸ್, ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇಣುಗೋಪಾಲ್ ಭಟ್ ಸೋಮಾಜೆ, ರಾಮಣ್ಣ ಪೂಜಾರಿ ಬಾಂಕನ, ಗೋವಿಂದರಾಜ್ ಭಟ್ ಸೋಮಾಜೆ, ಜೇಮ್ಸ ಜೋಸ್, ಶಾಹುಲ್ ಹಮೀದ್ ಹಾಜಿ ಖಂಡಿಗೆ,ಸಂಕಮ್ಮ ಬಾಂಕನ, ಶಂಕರ ಮೂಲ್ಯ ಸೋಮಾಜೆ, ಬಾಬು ಮೂಲ್ಯ ಸೋಮಾಜೆ, ಕುಟುಂಬಶ್ರೀಯ ಸದಸ್ಯಯರು ಮೋದಲಾದವರು ರಸ್ತೆ ನಿರ್ಮಾಣಕ್ಕೆ ಕೈ ಜೊಡಿಸಿದರು.

ರಸ್ತೆಯನ್ನು ಇನ್ನಷ್ಟು ಅಗಲಗೊಳಿಸುವುದು ಮತ್ತು ಸುಗಮ ವಾಹನ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ ಎಣ್ಮಕಜೆ ಗ್ರಾಮ ಪಂಚಾಯತು ಅಧಿಕೃತರಲ್ಲಿ ರಸ್ತೆಯ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ವಿವರಿಸುವ ಯೋಜನಾ ರೇಖೆಯನ್ನು ಎನ್.ಎಸ್.ಎಸ್. ಯೋಜನಾಧಿಕಾರಿಯಾದ ಶಂಕರ ಖಂಡಿಗೆ ಅವರು ಪಂಚಾಯತು ಅಧ್ಯಕ್ಷೆ ರೂಪವಾಣೀ ಆರ್. ಭಟ್ ಇವರಿಗೆ ಶಿಬಿರದ ಸಮಾರೋಪದಂದು ಹಸ್ತಾಂತರಿಸಿದರು.