ಪೆರ್ಲ : ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ಬೇಂಗಪದವು ಬಸ್ಸು ತಂಗುದಾಣವನ್ನು ಊರ ದಾನಿಗಳ ಸಹಾಯದಿಂದ ಕೇವಲ ಐದು ದಿನದಲ್ಲಿ ನಿರ್ಮಿಸಿ ದಾಖಲೆ ಮಾಡಿದ್ದಾರೆ. ಈ ಬಸ್ಸು ತಂಗುದಾಣವನ್ನು ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪಾವಾಣಿ ಆರ್. ಭಟ್ ಲೋಕಾರ್ಪಣೆ ಮಾಡಿದರು.
ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯ ಸತೀಶ್ ಕುಲಾಲ್ ನಲ್ಕ, ನಾಲಂದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿಯಾದ ಶಿವಕುಮಾರ್ ಕೆ, ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮೆನೇಜರ್ ರಾಧಾಕೃಷ್ಣ ಅಡ್ಯಂತಾಯ, ಮುಖ್ಯೋಪಾದ್ಯಾಯರಾದ ಶಿವಕುಮಾರ್ ಎಸ್, ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ ಖಂಡಿಗೆ, ಕ್ಯಾಂಪ್ಕೊ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಡಾ.ಶ್ರೀಪತಿ ಕಜಂಪಾಡಿ, ಎಸ್ ರಾಜಾರಾಮ್ ಪೆರ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೇಂಗಪದವು ಪ್ರದೇಶವು ಪೆರ್ಲ ಪೇಟೆಯಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ದೈನಂದಿನ ಕೆಲಸ ಕಾರ್ಯಗಳನ್ನು ಪೂರೈಸಲು ಪೆರ್ಲ ಪೇಟೆಯನ್ನು ತಲುಪಲು ಹೆಚ್ಚಿನ ಜನರು ಬಸ್ಸನ್ನೇ ಆಶ್ರಯಿಸುತ್ತಿದ್ದಾರೆ. ಮಾತ್ರವಲ್ಲ ಅನೇಕ ವಾಹನಗಳ ಸಂಚಾರವಿದ್ದು ಹತ್ತಿರದಲ್ಲೆ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ ಪ್ರಯಾಣಿಕರಿಗೆ ತಮ್ಮ ಆಯಾಸ ಪರಿಹರಿಸಲು ಮತ್ತು ವಿಶ್ರಮಿಸಲು ಯಾವುದೇ ಸೌಕರ್ಯವಿರಲಿಲ್ಲ. ಶಾಲೆ, ನೂರಾರು ಮನೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಒಂದು ತಂಗುದಾಣ ಅತೀ ಅಗತ್ಯ ಎಂಬುದನ್ನು ಮನಗಂಡು ಊರಿನ ಮಹನೀಯರು ಮತ್ತು ಎನ್.ಎಸ್.ಎಸ್ ಘಟಕವು ಒಂದು ದೊಡ್ಡ ಯೋಜನೆಯನ್ನು ಪೂರ್ತಿಗೊಳಿಸಿದೆ. ಈ ಮಹತ್ಕಾರ್ಯಕ್ಕೆ ವಸ್ತು ರೂಪವಾಗಿ ಸಹಾಯವನ್ನು ಒದಗಿಸಿದ ಶಾಹುಲ್ ಹಮೀದ್ ಹಾಜಿ ಖಂಡಿಗೆ, ಉದಯ ಚೆಟ್ಟಿಯಾರ್ ಸದಸ್ಯರು ಎಣ್ಮಕಜೆ ಗ್ರಾಮ ಪಂಚಾಂiiತು, ರಾಧಾಕೃಷ್ಣ ಆಳ್ವ ಪೂವನಡ್ಕ, ಶಾಫಿ ಬೇಂಗಪದವು, ಅಶೋಕ ಬಾಂಕನ, ಶಶಿಧರ ನಾಯಾಕ್ ಬೇಂಗಪದವು, ಮುಸ್ತಫ ಮತ್ತು ಬಳಗದವರು ಸಹಕರಿಸಿದರು. ಶ್ರೀಧರ ಖಂಡಿಗೆ, ಸಿದ್ಧಿವಿನಾಯಕ ಆಟ್ಸ್ & ಸ್ಪೋಟ್ಸ್ ಕ್ಲಬ್ ಸೇರಾಜೆ, ನೇತಾಜಿ ಫ್ರೆಂಡ್ಸ್ ಸರ್ಕ್‌ಲ್ ಪೆರ್ಲ, ಫ್ರೆಂಡ್ಸ್ ಗ್ರೂಪ್ ಪೂವನಡ್ಕ, ಮಾಹಾಲಿಂಗೇಶ್ವರ ಆಟ್ಸ್ & ಸ್ಪೋಟ್ಸ್ ಕ್ಲಬ್ ಬಜಕೂಡ್ಲು, ಇತರ ಊರಿನ ಮಹಾನೀಯರು ಮತ್ತು ಎನ್.ಎಸ್.ಎಸ್ ಯೋಜನಾಧಿಕಾರಿಯಾದ ಶಂಕರ ಖಂಡಿಗೆ ಹಾಗೂ ಎನ್.ಎಸ್.ಎಸ್ ಘಟಕದ ಸದಸ್ಯರಾದ ವಿದ್ಯಾರ್ಥಿಗಳು ಬಸ್ಸು ತಂಗುದಾಣ ನಿರ್ಮಿಸಲು ಶ್ರಮಿಸಿದ್ದಾರೆ.