ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ಎಣ್ಮಕಜೆ ಪಂಚಾಯತಿಗೆ ಒಳಪಟ್ಟ ಬೇಂಗಪದವು ಅಂಗನವಾಡಿ ಪರಿಸರವನ್ನು ಶುಚಿಗೊಳಿಸಲಾಯಿತು. ಈ ಕಾಯಕ್ರಮವನ್ನು ವಾರ್ಡು ಸದಸ್ಯರಾದ ಮೊಹಮ್ಮದ್ ಹನೀಫ್ ನಡುಬೈಲು ಅವರು ಉದ್ಘಾಟಿಸಿ ಎನ್ಎಸ್ಎಸ್ನಂತಹ ವಿದ್ಯಾರ್ಥಿ ಸಂಘಟನೆಗಳು ಪರಿಸರ ಸಂರಕ್ಷಣೆ ಹಾಗು ಶುಚಿತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯ ಮತ್ತು ಸ್ವಾಗತಾರ್ಹ ಎಂದು ಹೇಳಿದರು. ಅತ್ಯಂತ ಎಳೆಯ ವಯಸ್ಸಿನಲ್ಲೇ ಪರಿಸರ ಪ್ರೇಮ, ಪರಿಸರದ ಬಗೆಗಿನ ಕಾಳಜಿ ಸೃಷ್ಟಿಸುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಮಮತಾ ಅವರು ಅಭಿಪ್ರಾಯಪಟ್ಟರು. ಶುದ್ಧವಾದ ಗಾಳಿ, ನೀರು ಹಾಗು ಆಹಾರ ಎಂಬಿವುಗಳು ಆರೋಗ್ಯಕರ ಬದುಕಿಗೆ ಅಗತ್ಯ ಅದೇ ರೀತಿ ಇವುಗಳು ದೊರಕಲು ಜಲಸಂರಕ್ಷಣೆ, ವನಸಂರಕ್ಷಣೆ ಹಾಗು ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಶ್ರೀ ಶಂಕರ ಖಂಡಿಗೆ ಅವರು ಹೇಳಿದರು.
ಅಂಗನವಾಡಿ ಸಹಾಯಕಿ ಶ್ರೀಮತಿ ಪುಷ್ಪಾ, ಎನ್ ಎಸ್ ಎಸ್ ಸದಸ್ಯರಾದ ಮುರಳಿಕೃಷ್ಣ, ನಿತಿನ್, ಸಜಿತ್ ಕು| ನಯನ, ಕು| ಪವಿತ್ರ, ಕು| ನಿಶಿತ ಮೊದಲಾದವರು ಪರಿಸರ ಶುಚಿತ್ವ ಕಾರ್ಯಕ್ರಮದಲ್ಲಿ ಸಹಕರಿಸಿದರು. ಮತ್ತು ಎನ್ ಎಸ್ ಎಸ್ ಸದಸ್ಯರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡಿದ್ದರು.