ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿಎನ್ಎಸ್ಎಸ್ ವತಿಯಿಂದಮಕ್ಕಳ ದಿನಾಚರಣೆಯನ್ನುಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಧನ್ಯ ಕೆ.ಪಿ ವಹಿಸಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲು ಅವರಿಗೆ ಮಕ್ಕಳಲ್ಲಿದ್ದ ಪ್ರೀತಿಯೆ ಕಾರಣ ಎಂದು ಹೇಳಿದರು. ಬಾಲಕಾರ್ಮಿಕತ್ವದ ನಿರ್ಮೂಲನೆ, ಬಾಲಾಪರಾದ, ಮೊದಲಾದ ಕೆಟ್ಟಪಧ್ದತಿಗಳನ್ನು ಹೋಗಲಾಡಿಸಿ ಮಕ್ಕಳ ಭವಿಷ್ಯವನ್ನು ಸುದೃಢಗೊಳಿಸಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾದ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಅರ್ಪಿತಾ ಅವರು ಮಾತನಾಡಿ ಇಂದಿನ ಮಕ್ಕಳು ಮುಂದಿನ ರಾಷ್ಟ್ರ್ಟದ ಶಿಲ್ಪಿಗಳು ಎಂದುಹೇಳಿದರು. ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ದೀಪ್ತಿ ಮಕ್ಕಳಿಂದಲೇ ನಡೆಸುವ ಕಾರ್ಯಕ್ರಮವು ಒಂದು ಹೊಸ ಅನುಭವ ಹಾಗು ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ ಹಾಗೂ ಕಾರ್ಯಕ್ರಮ ಸಂಘಟಿಸುವ ಸಾಮರ್ಥ್ಯ ಬರುತ್ತದೆ ಎಂದು ಹೇಳಿದರು.
ಎನ್ಎಸ್ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಕನ್ನಡ ಉಪನ್ಯಾಸಕ ಕೇಶವ ಶರ್ಮ ಸಭೆಯಲ್ಲಿ ಹಾಜರಿದ್ದರು. ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಚಿದಾನಂದ ಸ್ವಾಗತಿಸಿ,ಪ್ರಥಮ ವರ್ಷದ ಭೂಗೋಳಶಾಸ್ತ್ರ ವಿಭಾಗದ ಪವಿತ್ರ ವಂದಿಸಿದರು. ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಅಭಿಲಾಷ್ ಎಂ ಕಾರ್ಯಕ್ರಮ ನಿರೂಪಿಸಿದರು.