ಪೆರ್ಲ ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಈ ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಹಿಂದಿ ಸಹಪ್ರಾಧ್ಯಾಪಕಿ ಶಾಂಭವಿಯವರು ಇಂದು ಜನರು ವಾಣಿಜ್ಯ ಬೆಳೆಗಳನ್ನು ಬೆಳೆಸಿ ತಮ್ಮ ಸಂಪತ್ತನ್ನು ಹೆಚ್ಚಿಸುತ್ತಾ ಸುಖ ಭೋಗಗಳ ಕಡೆಗೆ ಮಾರು ಹೋದದ್ದರಿಂದ ಆಹಾರ ಉತ್ಪನ್ನಗಳ ಪ್ರಮಾಣ ಕುಸಿಯುತ್ತಿದೆ. ಇದು ಮುಂದೆ ಒಂದು ಕಾಲಕ್ಕೆ ತೀವ್ರ ಸಂಕಷ್ಟಕ್ಕೆ ಎಡೆಮಾಡಿಕೊಡುತ್ತದೆ. ಆದುದರಿಂದ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಕಡೆಗೆ ಯುವಕರು ಮನಸ್ಸು ಮಾಡಬೇಕು, ಬದುಕಲು ಸಂಪತ್ತಿಗಿಂತ ಆಹಾರ ಮುಖ್ಯ ಎಂದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಯವರು ಇಂದಿನ ಜನರ ನಡವಳಿಕೆಗಳೇ ಆಹಾರ ಕೊರತೆಗಳಿಗೆ ಕಾರಣ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಗೀತಾ ಭಟ್ ಮತ್ತು ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ವಿಕಾಸ್, ಸುಧಾಕರ, ಭವಿಷ ಉಪಸ್ಥಿತರಿದ್ದರು. ಗಿರೀಶ್ ಸ್ವಾಗತಿಸಿ ಅಭಿಲಾಷ್ ವಂದಿಸಿದರು. ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಭಾಗವಹಿಸಿದರು.