ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಇತ್ತೀಚೆಗೆ ಪೆರ್ಲ ಕನ್ನಟಿಕಾನದಲ್ಲಿರುವ ’ಬಡ್ಸ್’ ಶಾಲೆಗೆ ಬೇಟಿ ಕೊಡುವುದರ ಮೂಲಕ ಎನ್. ಎಸ್.ಎಸ್ ದಿನವನ್ನು ಆಚರಿಸಿತು. ಎನ್.ಎಸ್.ಎಸ್ ಸದಸ್ಯರು ಆ ಶಾಲೆಯ ಮಕ್ಕಳ ಮುಂದೆ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು.
ಹೊಸ ತಂತ್ರಜ್ಞಾನಗಳಿಂದ ಕೂಡಿದ ಆಧುನಿಕ ಯುಗದಲ್ಲಿ ಅವು ಯಾವುದರ ಪರಿವೆಯೇ ಇಲ್ಲದೆ ಬದುಕುತ್ತಿರುವ ಮುಗ್ದ ಮಕ್ಕಳು ಈ ಬಡ್ಸ್ ಶಾಲೆಯಲ್ಲಿದ್ದಾರೆ. ಹೊರ ಪ್ರಪಂಚದ ಜ್ಞಾನವಿಲ್ಲದ ಮತ್ತು ಯಾವ ಸುಖ ಸಂತೋಷವನ್ನು ಅರಿಯದ ಮುಗ್ದ ಮಕ್ಕಳನ್ನು ಒಂದಷ್ಟು ಹೊತ್ತು ಸಂತೋಷಗೊಳಿಸಿ ಅವರ ಚಟುವಟಿಕೆಗಳನ್ನು ನಾಲಂದದ ವಿದ್ಯಾರ್ಥಿಗಳು ಕಂಡು ಮೂಕ ಪ್ರೇಕ್ಷಕರಾದರು. ಆ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ಕೊಟ್ಟು ಮಾನವೀಯ ಮೌಲ್ಯವನ್ನು ಮೆರೆದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ,ಉಪನ್ಯಾಸಕರಾದ ಕೆ. ಕೇಶವ ಶರ್ಮ ,ಉಪನ್ಯಾಸಕಿಯರಾದ ಗೀತಾ ವಿ. ಭಟ್ ಮತ್ತು ಶಾಂಭವಿ, ಬಡ್ಸ್ ಶಾಲೆಯ ಶಿಕ್ಷಕಿಯರಾದ ಮರಿಂiiಂಬಿ ಮತ್ತು ಜ್ಯೋತಿ ಉಪಸ್ಥಿತರಿದ್ದರು . ಎನ್. ಎಸ್.ಎಸ್. ವಿದ್ಯಾರ್ಥಿಗಳಾದ ಸೂರಜ್, ಸುಧಾಕರ, ಭವಿಷ್ಯ ಮೊದಲಾದವರು ಭಾಗವಹಿಸಿದರು.