ಜೂನ್ 27, 2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗವು ’ಸಂಖ್ಯಾಶಾಸ್ತ್ರದ ಪರಿಮಾಣಗಳ ಬಳಕೆ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಣ್ಣೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧಕಿ ಶ್ರೀಮತಿ ಉದಯ.ಎ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಖ್ಯಾಶಾಸ್ತ್ರವು ನಮ್ಮ ಜೀವನಕ್ಕೆ ಅಗತ್ಯವಾದ ಒಂದು ಮಾನದಂಡ ಎಂದರು. ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ ಮತ್ತು ಸ್ಟಾಫ್ ಸೆಕ್ರೆಟರಿ ಕೆ.ಕೇಶವಶರ್ಮ ಶುಭಹಾರೈಸಿದರು. ಉಪನ್ಯಾಸಕಿ ಕು| ಶಿಲ್ಪಾ ಪ್ರಾರ್ಥಿಸಿದರು. ಉಪನ್ಯಾಸಕ ಅನೀಶ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಶ್ರೀನಿಧಿ.ಕೆ ವಂದಿಸಿದರು. ಕಾರ್ಯಕ್ರಮದ ಅನಂತರ ಸಂಖ್ಯಾಶಾಸ್ತ್ರದ ಉಪಯೋಗದ ಬಗೆಗೆ ಶ್ರೀಮತಿ ಉದಯ ಎ. ಅವರು ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾಲೇಜಿನ ಎಲ್ಲಾ ಉಪನ್ಯಾಸಕ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.