ಅಂತರಾಷ್ಠ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಒಂದು ವಾರದ ಯೋಗ ಶಿಬಿರ ಆರಂಭವಾಗಿದೆ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷರು ಶಿಬಿರಕ್ಕೆ ಚಾಲನೆ ನೀಡಿದರು. ಯೋಗಾಚಾರ್ಯರಾದ ಆನೆಮಜಲು ಶ್ರೀ ವಿದ್ಯಾಧರರು ಯೋಗಾಸನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ಶಿಬಿರ ಪ್ರಾರಂಭಿಸಿದರು. ಉಪನ್ಯಾಸಕ ಕೆ.ಕೇಶವಶರ್ಮ ಯೋಗಾಚಾರ್ಯರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಮತ್ತು ಶ್ರೀನಿಧಿಯವರು ಶಿಬಿರದ ಜವಾಬ್ದಾರಿಯನ್ನು ವಹಿಸಿಕೊಂಡರು. ಉಪನ್ಯಾಸಕರು ಮತ್ತು 40 ಕ್ಕೂ ಮಿಕ್ಕಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.