×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಹಿರೋಷಿಮಾ ನಾಗಸಾಕಿ ದಿನಾಚರಣೆ

ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಭವ್ಯ ಬಿ.ಅಧ್ಯಕ್ಷತೆ ವಹಿಸಿ ಮಾತನಾಡಿ,ಹಿರೋಷಿಮಾ ಮತ್ತು ನಾಗಸಾಕಿ ಮೇಲಿನ ಪರಮಾಣು ಬಾಂಬ್ ದಾಳಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಅಣುಬಾಂಬ್ ಸ್ಫೋಟದ ರೇಡಿಯೇಶನ್ ಪರಿಣಾಮ ಅಸಂಖ್ಯಾತ ಮಂದಿ ಕ್ಯಾನ್ಸರ್​ ಸಹಿತ ಮತ್ತಿತರ ರೋಗಗಳಿಂದ ಮೃತಪಟ್ಟಿದ್ದು ಜಗತ್ತು ಕಂಡ ಕರಾಳ ಅಧ್ಯಾಯ ಎಂದರು.

ಮಲಯಾಳಂ ವಿಭಾಗದ ಪ್ರಾಧ್ಯಾಪಕಿ ವಿನೀಶ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿ, ಎರಡನೇ ಜಾಗತಿಕ ಯುದ್ಧದ ಬಳಿಕ ಅಮೇರಿಕ ಸಂಯುಕ್ತ ಸಂಸ್ಥಾನವು ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ ಹಿರೋಷಿಮಾದ ಮೇಲೆ ೧೯೪೫ರ ಆಗಸ್ಟ್ ೬ರಂದು ಇತಿಹಾಸದಲ್ಲೆ ಮೊದಲ ಬಾರಿ ಪರಮಾಣು ಬಾಂಬ್ ದಾಳಿ ನಡೆಸಿದೆ. ಆಗಸ್ಟ್ 6ರಂದು ಹಿರೋಷಿಮಾ ಮೇಲೆ ಲಿಟ್ಲ್ ಬಾಯ್ ಹೆಸರಿನ ಬಾಂಬ್ ಹಾಗೂ ಆಗಸ್ಟ್ 9ರಂದು ಫ್ಯಾಟ್ ಮ್ಯಾನ್ ಎಂಬ ಬಾಂಬನ್ನು ಸ್ಫೋಟಿಸಲಾಗಿದೆ. ಇಂತಹ ಘೋರ ಘಟನೆ ನಡೆಯದಿರಲಿ ಎಂಬ ಕಾರಣಕ್ಕೆ ಹಿರೋಷಿಮಾ ಮತ್ತು ನಾಗಸಾಕಿ ದಿನ ಸ್ಮರಿಸಲಾಗುತ್ತಿದೆ ಎಂದರು. ಎನ್ನೆಸ್ಸೆಸ್ ಸ್ವಯಂ ಸೇವಕಿ ಝಿನಾನ ಸ್ವಾಗತಿಸಿದರು. ಅನುಜ್ಞ ವಂದಿಸಿದರು. ಸ್ವಾತಿ ನಿರೂಪಿಸಿದರು.